ಕಾರ್ಕಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ 76ನೇ ವರ್ಷದ ಶಾರದಾ ಪೂಜೆಯನ್ನು ಶಾಲೆಯ ಮಾತೃಛಾಯ ಸರಸ್ವತಿ ಮಂದಿರದಲ್ಲಿ ನಡೆಸಲಾಯಿತು.
ಅರ್ಚಕ ಅನಂತಪದ್ಮನಾಭ ಗೋರೆ ಇವರ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಿತು.
ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ, ಕುಣಿತ ಭಜನೆ ಹಾಗೂ ಭಗವದ್ಗೀತೆ ಶ್ಲೋಕ ಪಠಣ ನಡೆಯಿತು.

ಶಿಕ್ಷಕರು ಆಡಳಿತ ಮಂಡಳಿಯ ಕಾರ್ಯದರ್ಶಿ, ಸದಸ್ಯರು ಪೋಷಕರು ಉಪಸ್ಥಿತರಿದ್ದರು.
ಶಿಕ್ಷಕಿ ಪ್ರತೀಕ್ಷಾ ಸ್ವಾಗತಿಸಿ, ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.































































