ಬಸ್ ಡಿಕ್ಕಿ ಹೊಡೆದು ಸ್ಕೂಟಿ ‌ಸವಾರನಿಗೆ ಗಾಯ: ದೂರು ದಾಖಲು

ಕಾರ್ಕಳ: ಸ್ಕೂಟಿ ಮತ್ತು ಬಸ್ಸಿನ ನಡುವೆ ನಡೆದ ಅಪಘಾತದಲ್ಲಿ ಸ್ಕೂಟಿ ಸವಾರ ಗಾಯಗೊಂಡ ಘಟನೆ ಮಾಳ ಗ್ರಾಮದ ಪೇರಡ್ಕ ಎಂಬಲ್ಲಿ ನಡೆದಿದೆ.

ಗಾಯಾಳುವನ್ನು ಲಿಯೋ ಡಿಸೋಜ (54) ಎಂದು ಗುರುತಿಸಲಾಗಿದೆ.

ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸ್ಕೂಟಿ ‌ಸವಾರ ಚಿಕ್ಕಮಗಳೂರಿನ ಕಿರಣ್ ಡಿಕುನ್ಹಾ ಅವರು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತಾವು ಸ್ಕೂಟಿಯಲ್ಲಿ ಬಜಗೋಳಿ ಮಾರ್ಗವಾಗಿ ಕೊಪ್ಪ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಜಗೋಳಿ ಮಾರ್ಗವಾಗಿ ಶೃಂಗೇರಿಗೆ ತೆರಳುತ್ತಿದ್ದ ಬಸ್ಸಿನ ಚಾಲಕ ಮಹಮ್ಮದ್ ಅಜ್ವೀರ್ ಅಜಾಗರೂಕತೆಯಿಂದ ವೇಗವಾಗಿ ಚಲಾಯಿಸುತ್ತಿದ್ದ ಪರಿಣಾಮ ಬಸ್ಸು ಸ್ಕೂಟಿಗೆ ಹಿಂಬದಿಯಿಂದ ಗುದ್ದಿದೆ. ಈ ವೇಳೆ ಸ್ಕೂಟಿಯಲ್ಲಿದ್ದ ಲಿಯೋ ಡಿಸೋಜಾ ಅವರು ಕೆಳಕ್ಕೆ ಬಿದ್ದು ಎಡಕಾಲು, ಮುಖ ಮತ್ತು ಕಣ್ಣಿಗೆ ಗಾಯಗಳಾಗಿರುವುದಾಗಿ ತಿಳಿಸಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

































































error: Content is protected !!
Scroll to Top