ರಾಷ್ಟ್ರೀಯ ಹೆದ್ದಾರಿ 169 : ಸಾಣೂರಿನಲ್ಲಿ ವಾಹನ ಡಿಕ್ಕಿ ಹೊಡೆದು ತಡೆಗೋಡೆ ರೆಫ್ಲೆಕ್ಟರ್ ಧ್ವಂಸ

ಶೀಘ್ರ ವ್ಯವಸ್ಥೆ ಸರಿಪಡಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

ಕಾರ್ಕಳ: ಸಾಣೂರು ‌ಹೊಸ‌ಸೇತುವೆ ಬಳಿ ವಾಹನವೊಂದು ಗುದ್ದಿದ ಪರಿಣಾಮ ಡಿವೈಡರ್ ರಿಫ್ಲೆಕ್ಟರ್ ಧ್ವಂಸವಾಗಿದೆ. ಪರಿಣಾಮ ಅಪಘಾತದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಕಳೆದ ಒಂದು ವಾರಗಳಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಗುತ್ತಿಗೆದಾರರು ಸಾಣೂರು ಹೊಸ ಸೇತುವೆಯ ಮೇಲೆ ಡಾಮರಿಕರಣವನ್ನು ಮಾಡುವ ಉದ್ದೇಶದಿಂದ ಹೆದ್ದಾರಿಯ ಒಂದೇ ಬದಿಯಲ್ಲಿ ಎರಡು ಕಡೆಯ ವಾಹನಗಳು ಸಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಡಿವೈಡರ್ ‌ರಿಫ್ಲೆಕ್ಟರ್‌ಗೆ ಹಾನಿಯಾಗಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ಸಾರ್ವಜನಿಕರ ಆತಂಕಕ್ಕೆ ‌ಕಾರಣವಾಗಿದೆ.

ಸಾಣೂರು ರಾಮಮಂದಿರದ ಎದುರು ಮೀಡಿಯನ್ ಓಪನಿಂಗ್ ಇದ್ದು(ರಸ್ತೆ ವಿಭಾಜಕ) ಅಲ್ಲಿ ಎರಡು ಬದಿಯ ವಾಹನಗಳು ರಸ್ತೆ ಬದಲಿಸಬೇಕಾದರೆ ಅದೇ ವಿಭಾಜಕವನ್ನು ಬಳಸುವ ಅನಿವಾರ್ಯತೆ ಇದ್ದು, ಅಪಘಾತಕ್ಕೆ ಆಹ್ವಾನ ನೀಡುವ ಸ್ಥಿತಿ ಕಳೆದ ಒಂದು ವಾರಗಳಿಂದ ಇದೆ. ವಾಹನವೊಂದು ಸಾಣೂರಿನ ರಾಮ ಮಂದಿರದ ಎದುರು ರಸ್ತೆ ವಿಭಾಜಕಕ್ಕೆ ಅಡ್ಡವಾಗಿ ಇಟ್ಟಿದ್ದ ಡಿವೈಡರ್ ಮತ್ತು ರೆಫ್ಲೆಕ್ಟರಿಗೆ ಡಿಕ್ಕಿ ಹೊಡೆದ ಪರಿಣಾಮ ಅವು ಧ್ವಂಸವಾಗಿವೆ.

ಹೆದ್ದಾರಿ ಗುತ್ತಿಗೆದಾರರು ಕೂಡಲೇ ಸಾಣೂರು ಸೇತುವೆ ಮೇಲಿನ ಡಾಮರೀಕರಣ ಕಾರ್ಯವನ್ನು ಪೂರ್ಣಗೊಳಿಸಿ, ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ವಾಹನ ಹೋರಾಟಕ್ಕೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಸಂಭಾವ್ಯ ಅಪಘಾತವನ್ನು ತಪ್ಪಿಸಬಹುದು. ಇಲ್ಲವಾದಲ್ಲಿ ಸಾಣೂರಿನಲ್ಲಿ ಅಪಘಾತಗಳ ಸರಣಿ ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಈಗ ಆಗಿರುವ ಮತ್ತು ಸಂಭವನೀಯ ಎಲ್ಲಾ ಜೀವ ಹಾನಿ ಮತ್ತು ಅಪಘಾತಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವಿಳಂಬ ಧೋರಣೆ ಮತ್ತು ಅಸಡ್ಡೆ ಕಾರಣ ಎಂದು ಸಾಣೂರಿನ ಸಾರ್ವಜನಿಕರು ಆಕ್ರೋಶದಿಂದ ವ್ಯಕ್ತಪಡಿಸುತ್ತಿದ್ದಾರೆ. ಸಾಣೂರಿನ ಅಳಿದುಳಿದ ಕಾಮಗಾರಿಯನ್ನು ನಿರ್ವಹಿಸಲು ಗುತ್ತಿಗೆದಾರರು ಇದೇ ರೀತಿಯ ವಿಳಂಬ ಮತ್ತು ನಿರ್ಲಕ್ಷದ ಧೋರಣೆ ತಾಳಿದರೆ ಮುಂದಿನ ವಾರ ಸಾಣೂರಿನ ಎಲ್ಲಾ ನಾಗರಿಕರು ರಸ್ತೆಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಸಾಣೂರು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖ ಸಾಣೂರು ನರಸಿಂಹ ಕಾಮತ್ ಮಾಧ್ಯಮದ ಮೂಲಕ ಎಚ್ಚರಿಸಿದ್ದಾರೆ.





























































































































error: Content is protected !!
Scroll to Top