ಬೆಂಗಳೂರು: ಲೈಸೆನ್ಸ್ ಹೊಂದಿರದ ಅಕ್ರಮ ಬಂದೂಕುಗಳನ್ನು ಹೊಂದಿದವರು ನವೆಂಬರ್ 1 ರೊಳಗಾಗಿ ಸರ್ಕಾರಕ್ಕೆ ಸ್ವಯಂಪ್ರೇರಣೆಯಿಂದ ತಂದೊಪ್ಪಿಸಬೇಕು. ಇಲ್ಲವಾದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೀಡಿದ್ದಾರೆ.
ಅಕ್ರಮವಾಗಿ ಬಂದೂಕು ಇರಿಸಿಕೊಂಡವರಿಂದಾಗಿ ಹಲವು ಮಂದಿ ಅರಣ್ಯ ಸಿಬ್ಬಂದಿಗಳ ಸಾವಾಗಿದೆ. ಬಂದೂಕು ಅತ್ಯಗತ್ಯ ಎನ್ನುವವರು ಅದನ್ನು ಇಟ್ಟುಕೊಳ್ಳಲು, ಬಳಸಲು ಲೈಸೆನ್ಸ್ ಪಡೆದುಕೊಳ್ಳುವುದು ಕಡ್ಡಾಯ. ರಾಜ್ಯದಲ್ಲಿ ಅನೇಕ ಜನರು ಅಕ್ರಮ ಬಂದೂಕು ಇರಿಸಿಕೊಂಡಿರುವ ಮಾಹಿತಿ ಸರ್ಕಾರದ ಬಳಿ ಇದೆ ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿಯ ಬಗೆಗೂ ಮಾತನಾಡಿರುವ ಅವರು, ಮಂಗಳೂರು ಭೇಟಿಯ ಬಳಿಕ ಮೂರು ನಾಲ್ಕು ಜಿಲ್ಲೆಗಳ ರೈತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳು, ಬರ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಕಸ್ತೂರಿ ರಂಗನ್ ವರದಿಯ ಬಗೆಗೂ ವಿಶೇಷ ಅಧಿವೇಶನ ಕರೆದು ಚರ್ಚಿಸಲಾಗುವುದು ಎಂದು ಸಿ ಎಂ ಸಾಹೇಬರು ಹೇಳಿದ್ದಾರೆ.
































































