ಬೈಲೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗಾಂಧಿ ಸ್ಮಾರಕ ಭವನ ನೀರೆ ಬೈಲೂರು ಇಲ್ಲಿ 46ನೇ ವರ್ಷದ ಗಣೇಶೋತ್ಸವವು. ಸೆ. 14 ಮತ್ತು 15ರಂದು ನಡೆಯಲಿದೆ. ಸೆ. 14ರಂದು 10.00 ಗಂಟೆಗೆ ಪ್ರತಿಷ್ಠೆ, ಗಣಹೋಮ ಹಾಗೂ ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 2.00ರಿಂದ 1ರಿಂದ 7ನೇತರಗತಿಯ ಶಾಲಾ ಮಕ್ಕಳಿಗೆ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಭಕ್ತಿಗೀತೆ ಸ್ಪರ್ಧೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ಆಟೋಟ ಸ್ಪರ್ಧೆಗಳು ನಡೆಯಲಿದೆ. ಸಂಜೆ 3.00ರಿಂದ ಬೈಲೂರು ಜಿ. ಪಂ ವ್ಯಾಪ್ತಿಯ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಸಂಜೆ 5.30ರಿಂದ ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ ಬೈಲೂರು ಇವರಿಂದ ಭಜನಾ ಕಾರ್ಯಕ್ರಮ ನಂತರ ರಂಗಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಂಗತರಂಗ ಕಲಾವಿದರು ಕಾಪು ಇವರಿಂದ ಶೋಬಾಜಿ ನಾಟಕ ಪ್ರದರ್ಶನಗೊಳ್ಳಲಿದೆ.
ಸೆ. 15ರಂದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೆ.ಜಿ.ಎಫ್ ಹಿನ್ನಲೆ ಗಾಯಕಿ ಐರಾ ಆಚಾರ್ಯ, ಪ್ರಕಾಶ್ ಮಾಧವನ್ ಹಾಗೂ ರೂಪಾ ಪ್ರಕಾಶ್ ಮಾಧವನ್ ಸಾರಥ್ಯದಲ್ಲಿ ಸ್ಟಾರ್ ಧಮಾಕಾ ಸಂಗೀತ ರಸಮಂಜರಿ ಮತ್ತು ಆರ್ಯನ್ ಡ್ಯಾನ್ಸ್ ಸ್ಟುಡಿಯೋ ತಂಡದಿಂದ ಅಮೋಘ ನೃತ್ಯ ಪ್ರದರ್ಶನ ನಡೆಯಲಿದೆ. ಸಂಜೆ 6.00ಕ್ಕೆ ವಿಸರ್ಜನಾ ಪೂಜೆ ನಡೆದು ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


































































