ಮೂರೂರು-ಹಿರ್ಗಾನ: 3ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ

ಭಕ್ತರಿಂದ ರಜತ ಕಿರೀಟ, ತ್ರಿಶೂಲ ಸಮರ್ಪಣೆ

ಹಿರ್ಗಾನ: ಶ್ರೀಮಹಾಗಣಪತಿ ಗಣೇಶೋತ್ಸವ ಸಮಿತಿ ಮೂರೂರು ಹಿರ್ಗಾನ ಇಲ್ಲಿನ 3ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಂಭ್ರಮದಿಂದ ಜರುಗಲಿದೆ.

ಗಣೇಶೋತ್ಸವ ಸಮಿತಿ ಹಾಗೂ ರೈರ‍್ಸ್ ಆಫ್ ಕಾರ್ಕಳ ಸಹಯೋಗದಲ್ಲಿ ಎಣ್ಣೆಹೊಳೆಯಿಂದ ಬೆಳಗ್ಗೆ 8 ಗಂಟೆಗೆ ಗಣೇಶನ ವಿಗ್ರಹದ ಮೆರವಣಿಗೆ ನಡೆಯಲಿದೆ. ಈ ವೇಳೆ ಗಣೇಶನಿಗೆ ಭಕ್ತರಿಂದ ಬೆಳ್ಳಿಯ ಕಿರೀಟ ಮತ್ತು ನೆಲ್ಲಿಕಟ್ಟೆಯ ಸವಿತಾ ಪ್ರಕಾಶ್ ಶೆಟ್ಟಿ ಅವರು ಅರ್ಪಿಸಿರುವ ಬೆಳ್ಳಿಯ ತ್ರಿಶೂಲವನ್ನು ಪುರಮೆರವಣಿಗೆಯ ಮೂಲಕ ತರಲಾಗುತ್ತದೆ.

ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಬಹುಮಾನ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸೆ. 15ರ ಮಂಗಳವಾರದಂದು ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಇವರಿಂದ ಕನಕಾಂಗಿ ಕಲ್ಯಾಣ ಎಂಬ ಯಕ್ಷಗಾನ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲಾ ಭಗವದ್ಭಕ್ತರು ಆಗಮಿಸುವಂತೆ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತ ಕೋರಿದ್ದಾರೆ.







































































































































error: Content is protected !!
Scroll to Top