ಸೆ. 18: ಸಿಎಂ ಡಿ ಕೆ ಶಿವಕುಮಾರ್ ಹೆಬ್ರಿಗೆ

ಹೆಬ್ರಿ: ಸೆ. 18 ರಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೆಬ್ರಿಗೆ ಆಗಮಿಸಲಿದ್ದು, ಕಸ್ತೂರಿ ರಂಗನ್ ‌ವರದಿಗೆ ಸಂಬಂಧಿಸಿದಂತೆ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕಸ್ತೂರಿ ರಂಗನ್ ‌ವರದಿಗೆ ಸಂಬಂಧಿಸಿದ ಹಾಗೆ ಜನರಲ್ಲಿ ಸೃಷ್ಟಿಯಾಗಿರುವ ಆತಂಕ, ಆಕ್ಷೇಪಣೆಗಳ ಹಿನ್ನೆಲೆ ಈ ಸಭೆ ನಡೆಯಲಿದೆ. ಕಸ್ತೂರಿರಂಗನ್ ವರದಿಯ 7ನೇ ಕರಡು ಪ್ರಕಟಗೊಂಡಿದ್ದು, ಈ ವರದಿಯ ಕುರಿತು ಸಾರ್ವಜನಿಕ ಆಕ್ಷೇಪಣೆ, ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ.

ಜನವಸತಿ ಪ್ರದೇಶಗಳನ್ನು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಿಂದ ಕೈಬಿಡಬೇಕು ಎಂಬ ಒತ್ತಾಯ ಸಹ ವಿವಿಧೆಡೆಗಳಿಂದ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಹೆಬ್ರಿ ಭಾಗದಲ್ಲಿ ರೈತರು ಹಾಗೂ ಸ್ಥಳೀಯರೊಂದಿಗೆ ಡಿ ಕೆ ಶಿವಕುಮಾರ್ ಅವರು ಚರ್ಚೆ ನಡೆಸುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಅವರ ಹೆಬ್ರಿ ಭೇಟಿ ಹೆಚ್ಚು ಕುತೂಹಲ ಮೂಡಿಸಿದೆ ಎನ್ನಬಹುದು.

ಸೆ.18ರಂದು ಬೆಳಗ್ಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲಿರುವ ಮುಖ್ಯಮಂತ್ರಿಗಳು, ಬಳಿಕ ಹೆಬ್ರಿಯತ್ತ ತೆರಳಲಿದ್ದಾರೆ. ಅಲ್ಲಿನ ಸಭೆಯ ಬಳಿಕ ಹೆಬ್ರಿಯಿಂದ ಮಂಗಳೂರಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.







































































































































error: Content is protected !!
Scroll to Top