ಕಾರ್ಕಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜೋಡುರಸ್ತೆ, ಕುಕ್ಕಂದೂರು ಅಲ್ಲಿನ 43 ನೇ ವರ್ಷದ ಗಣೇಶೋತ್ಸವವು ಸೆ. 14 ರಿಂದ ಸೆ. 18 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಸೆ. 14 ರಂದು ಬೆಳಗ್ಗೆ ಪ್ರತಿಷ್ಠಾಪನಾ ಪೂಜೆ, ಗಣಪತಿ ವಿಗ್ರಹದ ಪೀಠಕ್ಕೆ ಬೆಳ್ಳಿಯ ಹೊದಿಕೆ ಸಮರ್ಪಣೆ, ರಾತ್ರಿ ಗಂಟೆ 8 ಕ್ಕೆ ಮಹಾ ಪೂಜೆ, ರಾತ್ರಿ ವಿಶೇಷ ಪೂಜೆ ನಡೆಯಲಿದೆ. ಸೆ. 15 ರಂದು ಗಣ ಹೋಮ, ಆಶ್ಲೇಷಾ ಬಲಿ, ಮಧ್ಯಾಹ್ನ ಪೂಜೆ, ರಾತ್ರಿ ವೇಳೆ ಮಹಾ ಪೂಜೆ, ರಾತ್ರಿ ವಿಶೇಷ ಪೂಜೆ ನಡೆಯಲಿದೆ. ಸೆ. 16 ರಂದು ರಾತ್ರಿಯ ಸಮಯದಲ್ಲಿ ಮಹಾ ಪೂಜೆ, ರಾತ್ರಿ ವಿಶೇಷ ಪೂಜೆ, ಸೆ. 17 ರಂದು ರಾತ್ರಿ ವೇಳೆ ಮಹಾ ಪೂಜೆ, ರಾತ್ರಿ ವಿಶೇಷ ಪೂಜೆ ಮತ್ತು ಸೆ. 18 ರಂದು ಬೆಳಗ್ಗೆ ಗಣ ಹೋಮ, ಮಧ್ಯಾಹ್ನ ಪೂಜೆ, ಸಂಜೆ ಮಹಾ ಪೂಜೆ ತದನಂತರ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿದೆ.
ಗಣೇಶೋತ್ಸವದ ಪ್ರತಿನಿತ್ಯವೂ ಭಜನೆ, ಕುಣಿತ ಭಜನೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮಗಳು ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಗವದ್ಭಕೇತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























