ಟೆನ್ಶನ್ ಬೇಡ, 2000 ರೂ. ಮೀರಿದ ಯುಪಿಐ ವಹಿವಾಟಿಗೂ ‌ಶುಲ್ಕ ಇಲ್ಲ: ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ನವದೆಹಲಿ: ಭಾರತದಲ್ಲಿ ಪ್ರತಿನಿತ್ಯ ಕೋಟ್ಯಂತರ ಜನರು ಬಳಕೆ ಮಾಡುವ ಡಿಜಿಟಲ್ ಪಾವತಿ ಯುಪಿಐ ವ್ಯವಸ್ಥೆ ಬಗ್ಗೆ ಉಂಟಾಗಿರುವ ಗೊಂದಲಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ‌ನೀಡಿದೆ.

ಯುಪಿಐ ಪೇಮೆಂಟ್ ವಹಿವಾಟು ರೂ. 2000 ವರೆಗೆ ನಡೆಯುವ ವಹಿವಾಟಿಗೆ ಯಾವುದೇ ಬ್ಯಾಂಕ್ ಅಥವಾ ಸಂಸ್ಥೆಗಳು ಶುಲ್ಕ ವಿಧಿಸುವ ಹಾಗಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟವಾಗಿ ತಿಳಿಸಿದೆ. ರುಪೇ, ಡೆಬಿಟ್ ಕಾರ್ಡ್ ವಹಿವಾಟುಗಳಿಗೂ ಇದೇ ನಿಯಮ ಅನ್ವಯಿಸುತ್ತದೆ ಎಂದು ಅಧಿಸೂಚನೆಯಲ್ಲಿ ಸರ್ಕಾರ ತಿಳಿಸಿದೆ.

ಇನ್ನು 2000 ರೂ. ಮೀರಿದ ಯುಪಿಐ ವ್ಯವಹಾರಗಳಿಗೆ ಶುಲ್ಕ ಪಾವತಿಸಬೇಕೇ? ಎನ್ನುವ ಸಾರ್ವಜನಿಕರ ಸಂದೇಹಕ್ಕೂ ಕೇಂದ್ರ ಹಣಕಾಸು ಸಚಿವಾಲಯ ಉತ್ತರ ನೀಡಿದೆ. ಎರಡು ಸಾವಿರ ರೂ. ಮೀರಿದ ಪಾವತಿಗಳಿಗೂ ‌ಶುಲ್ಕ ವಿಧಿಸುವ ಯಾವುದೇ ನಿಯಮ ಜಾರಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.















































































































































error: Content is protected !!
Scroll to Top