ಪ್ರೊ. ಎನ್.‌ ಆರ್.‌ ಶೆಟ್ಟಿ ನಿಧನಕ್ಕೆ ಡಾ. ಸುಧಾಕರ್‌ ಶೆಟ್ಟಿ ಸಂತಾಪ

ಪ್ರಾಧ್ಯಾಪಕ, ಚಿಂತಕ, ಸಂಶೋಧಕ ಪ್ರೊ. ಎನ್.‌ ಆರ್‌. ಶೆಟ್ಟಿ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಗಾಧ ಎಂದು ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ಬಣ್ಣಿಸಿದರು.
ಓರ್ವ ಶ್ರೇಷ್ಠ, ಮಾದರಿ ಆಡಳಿತಗಾರರಾಗಿದ್ದ ಎನ್.‌ ಆರ್.‌ ಶೆಟ್ಟಿ ಅವರು ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅನನ್ಯ. ಹಲವಾರು ಮಂದಿಯ ಪಿಎಚ್‌.ಡಿಗೆ ಪ್ರೇರಕರಾಗಿದ್ದ ಎನ್.‌ ಆರ್.‌ ಶೆಟ್ಟಿ ಅವರು ಸಾವಿರಾರು ಮಂದಿಯ ಜೀವನ ಬೆಳಗಿದವರು. ನವದೆಹಲಿಯ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜ್ಯುಕೇಷನ್‌ ಅಧ್ಯಕ್ಷರಾಗಿ, ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಇಂಜಿನಿಯರಿಂಗ್ ಎಜ್ಯುಕೇಷನ್ ಸೊಸೈಟೀಸ್ ಸಂಸ್ಥಾಪಕ ಉಪಾಧ್ಯಕ್ಷರಾಗಿ, ಕರ್ನಾಟಕ ಸರಕಾರ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶ ಕುರಿತು ಆಯೋಜಿಸಿದ್ದ ಏಕ ಸದಸ್ಯ ಆಯೋಗದ ಅಧ್ಯಕ್ಷರಾಗಿ, ಎನ್‌ಐಟಿಕೆ ಪ್ರಾಂಶುಪಾಲರಾಗಿ, ವಿವಿ ಉಪಕುಲಪತಿಗಳಾಗಿ ತಮ್ಮ ಹುದ್ದೆಗೆ ಎಳ್ಳಷ್ಟು ಚ್ಯುತಿಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಿ ನ್ಯಾಯ ಸಲ್ಲಿಸಿದವರು. ಶ್ರದ್ಧೆ, ಬದ್ಧತೆ, ಪ್ರಾಮಾಣಿಕತೆ, ಸರಳತೆಯೇ ಅವರ ವ್ಯಕ್ತಿತ್ವ ಎಂದು ಡಾ. ಸುಧಾಕರ್‌ ಶೆಟ್ಟಿ ಸಂತಾಪದಲ್ಲಿ ತಿಳಿಸಿದ್ದಾರೆ.

ಎನ್.‌ ಆರ್.‌ ಶೆಟ್ಟಿ ಕಾರ್ಕಳದವರು ಎನ್ನುವ ಹೆಮ್ಮೆ ನಮಗೆ. ನಿಟ್ಟೆಗೆ ನನ್ನನ್ನು ಪರಿಚಯಿಸಿದ ಪ್ರೊ. ಎನ್.‌ ಆರ್.‌ ಶೆಟ್ಟಿ ಅವರು ನನ್ನ ಮಾರ್ಗದರ್ಶಕರು. 2022 ಫೆ. 1ರಂದು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ನೈವೇದ್ಯ ಸುಧಾ ಕಟ್ಟಡ, ಆಡಿಟೋರಿಯಂ ಉದ್ಘಾಟಿಸಿರುವುದು ಸ್ಮರಣೀಯ. ಜ್ಞಾನಸುಧಾ ಸಂಸ್ಥೆ ಕುರಿತು ಅಪಾರ ಪ್ರೀತಿ, ಕಾಳಜಿ ಹೊಂದಿದ್ದ ಎನ್.‌ ಆರ್.‌ ಶೆಟ್ಟಿ ಅವರ ಗೌರವಾರ್ಥ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿದೆ ಎಂದು ಸುಧಾಕರ್‌ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























































































































error: Content is protected !!
Scroll to Top