ಕಾರ್ಕಳ : ಕಾರ್ಕಳ ರೋಟರಿ ಕ್ಲಬ್‌ನ 2026-27ನೇ ಸಾಲಿನ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಕೆ. ವಿಜೇಂದ್ರ ಕುಮಾರ್, ಕಾರ್ಯದರ್ಶಿಯಾಗಿ ಉದಯ್ ಕುಮಾರ್ ಕಡಂಬ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕೃಷ್ಣ ಎಂ. ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾಗಿ ನವೀನ್‌ಚಂದ್ರ ಶೆಟ್ಟಿ, ಜತೆ ಕಾರ್ಯದರ್ಶಿ ಸುಬ್ರಹ್ಮಣ್ಯ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ಡಾ. ಆಶಾ ಪಿ. ಹೆಗ್ಡೆ, ಕೋಶಾಧಿಕಾರಿ ಹರ್ಷಿಣಿ ವಿಜಯರಾಜ್, ಸಾರ್ಜಂಟ್ ಎಟ್ ಆರ್ಮ್ಸ್ ಆಗಿ ಶಂಕರ್ ಕುಡ್ವ ಹಾಗೂ ಕ್ಲಬ್ ಸರ್ವೀಸ್ ಮತ್ತು ಪ್ರೆಸಿಡೆಂಟ್ ಇಲೆಕ್ಟ್ ಆಗಿ ರವೀಂದ್ರ ಮೊಯಿಲಿ ಆಯ್ಕೆಯಾಗಿದ್ದಾರೆ.
ಕ್ಲಬ್‌ನ ವಿವಿಧ ಇಲಾಖೆಗಳ ನಿರ್ದೇಶಕರಾಗಿ ವೊಕೇಶನಲ್ ಸರ್ವೀಸ್ ವಿಭಾಗಕ್ಕೆ ಅರುಣ್ ಕುಮಾರ್ ಮಾಂಜ, ಕಮ್ಯುನಿಟಿ ಸರ್ವೀಸ್‌ಗೆ ಇಕ್ಬಾಲ್ ಅಹಮದ್, ಇಂಟರ್‌ನ್ಯಾಶನಲ್ ಸರ್ವೀಸ್ ವೇಣುಗೋಪಾಲ್ ಪಿ.ಎಸ್., ನ್ಯೂ ಜನರೇಷನ್ ಆ್ಯಂಡ್ ಯೂತ್ ಸರ್ವೀಸ್ ಸೌಜನ್ಯ ಉಪಾಧ್ಯಾಯ ಹಾಗೂ ಡಿಸ್ಟಿಕ್ಸ್ ಪ್ರೊಜೆಕ್ಟ್ ನಿರ್ದೇಶಕರಾಗಿ ಸಮದ್ ಖಾನ್ ಆಯ್ಕೆಯಾಗಿದ್ದಾರೆ.
ಪಬ್ಲಿಕ್ ಇಮೇಜ್ ನಿರ್ದೇಶಕಿ ಜ್ಯೋತಿ ಪದ್ಮನಾಭ ಭಂಡಿ, ಬುಲೆಟಿನ್ ಎಡಿಟರ್ ಐಟಿ ಟ್ರೈನಿಂಗ್ ಚೇರ್ಮನ್ ಆಗಿ ರೇಖಾ ಉಪಾಧ್ಯಾಯ, ಬುಲೆಟಿನ್ ಕೊ-ಎಡಿಟರ್ ಹಾಗೂ ಕ್ಲಬ್ ಮೆಂಬರ್ ಶಿಪ್ ಡೆವಲಪ್‌ಮೆಂಟ್ ಜವಾಬ್ದಾರಿಗೆ ಗಣೇಶ್ ಸಾಲಿಯನ್, ಟಿಆರ್‌ಎಫ್ ನಿರ್ದೇಶಕರಾಗಿ ಸುವರ್ಣಾ ನಾಯಕ್, ಪೋಲಿಯೋ ಪ್ಲಸ್ ವಿಭಾಗಕ್ಕೆ ಡಾ. ಸುನಿಲ್ ಬಾಳಿಗ, ಫೋರ್-ವೇ-ಟೆಸ್ಟ್‌ಗೆ ಹರಿಪ್ರಕಾಶ್ ಶೆಟ್ಟಿ, ಕ್ರೀಡಾ ವಿಭಾಗಕ್ಕೆ ಜೋನ್ ಆರ್. ಡಿ’ಸಿಲ್ವಾ ಹಾಗೂ ಸಾಂಸ್ಕೃತಿಕ ವಿಭಾಗದ ನಿರ್ದೇಶಕರಾಗಿ ಶಿವಕುಮಾರ ನಿಯೋಜನೆಗೊಂಡಿದ್ದಾರೆ.
ವಿವಿಧ ಸಮಿತಿಗಳ ಚೇರ್ಮನ್‌ಗಳಾಗಿ ಆರ್‌ಸಿಸಿಗೆ ಮಮತಾ ಶೆಟ್ಟಿ, ರೋಟರ್ಯಾಕ್ಟ್‌ಗೆ ಬಾಲಕೃಷ್ಣ ದೇವಾಡಿಗ, ಇಂಟರ್ಯಾಕ್ಟ್‌ಗೆ ಶೇಖರ್ ಎಚ್. ಮತ್ತು ಆ್ಯನ್ಸ್ ಸಮಿತಿಗೆ ಗೀತಾ ಎಸ್. ಕಾಮತ್ ಆಯ್ಕೆಯಾಗಿದ್ದಾರೆ.

ಇಂದು ಪದಗ್ರಹಣ
ಪದಗ್ರಹಣ ಸಮಾರಂಭವು ಇಂದು (ಜು. 8) ಸಂಜೆ 6.30ಕ್ಕೆ ಕಾರ್ಕಳದ ಹೊಟೇಲ್ ಪ್ರಕಾಶ್‌ನ ಉತ್ಸವ ಸಭಾಂಗಣದಲ್ಲಿ ಜರುಗಲಿದೆ. ರೋಟರಿ ಡಿಸ್ಟ್ರಿಕ್ಟ್ ಲರ್ನಿಂಗ್ ಫೆಸಿಲಿಟೇಟರ್ ಸಿಎ ದೇವ್ ಆನಂದ್ ಪದಗ್ರಹಣ ನೆರವೇರಿಸಲಿದ್ದಾರೆ. 2026-27ನೇ ಸಾಲಿನ ರೋಟರಿ ಅಸಿಟೆಂಟ್ ಗರ್ವನರ್ ಕೆ. ಸುರೇಶ್ ನಾಯಕ್, ಜೋನಲ್ ಲೆಫ್ಟಿನೆಂಟ್ ಡಾ. ಕೃಷ್ಣಪ್ರಸಾದ್, 2025-26ನೇ ಸಾಲಿನ ಅಸಿಟೆಂಟ್ ಗವರ್ನರ್ ವಿಘ್ನೇಶ್ ಶೆಣೈ, ಜೋನಲ್ ಲೆಫ್ಟಿನೆಂಟ್ ಜೋನ್ ಆರ್. ಡಿ’ಸಿಲ್ವಾ ಭಾಗವಹಿಸಲಿದ್ದಾರೆ ಎಂದು ನೂತನ ಅಧ್ಯಕ್ಷ ವಿಜೇಂದ್ರ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾನೂನು ಕಣಜ
ನ್ಯಾಯವಾದಿಯಾಗಿರುವ ವಿಜೇಂದ್ರ ಕುಮಾರ್ ಅವರು ಉತ್ತಮ ಬರಹಗಾರರೂ ಆಗಿದ್ದು, ಕಳೆದ ಐದು ವರ್ಷಗಳಿಂದ ʼನ್ಯೂಸ್ ಕಾರ್ಕಳʼ ವೈಬ್‌ಸೈಟ್‌ನಲ್ಲಿ ಪ್ರತಿ ಗುರುವಾರ ಕಾನೂನು ಕಣಜ ಎಂಬ ಶೀರ್ಷಿಕೆಯಡಿಯಲ್ಲಿ ವಿವಿಧ ಕಾಯ್ದೆಗಳಿಗೆ ಸಂಬಂಧಿಸಿದಂತೆ ಅಂಕಣ ಪ್ರಕಟವಾಗುತ್ತಿದೆ. ಇವರ ಈ ಬರಹ ಜನಮೆಚ್ಚುಗೆ ಪಡೆದಿದ್ದು, ಕಾನೂನಿನ ಅರಿವು ಮೂಡಿಸುವಲ್ಲಿ ಯಶಸ್ವಿ ಹಾದಿಯಲ್ಲಿ ಸಾಗುತ್ತಿದೆ ಎಂಬುದು ನ್ಯೂಸ್ ಕಾರ್ಕಳದ ಹೆಮ್ಮೆಯ ಸಂಗತಿಗಳಲ್ಲಿ ಒಂದಾಗಿದೆ.










