ಕಾರ್ಕಳ : ಬೈಲೂರು ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದಾನಿಗಳಿಂದ ಕೊಡಮಾಡಿದ ಪ್ರಿಂಟರ್ ಹಾಗೂ ಬೇಬಿ ಚೇರ್ ಹಸ್ತಾಂತರ ಕಾರ್ಯಕ್ರಮ ಜು. 6ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಎಸ್‌ಡಿಎಂಸಿಯ ಮಾಜಿ ಅಧ್ಯಕ್ಷ ನೀರೆ ಕುದ್ರು ಶ್ರೀ ಮಂಜುನಾಥ್ ಶೆಣೈಯವರ ಪ್ರಾಯೋಜಕತ್ವದಲ್ಲಿ ಪ್ರಿಂಟರ್ ಹಾಗೂ ಆರ್.ಫರ್ನಿಚರ್ ಮಾಲಕ ಹರಿಶ್ಚಂದ್ರ ಗಡಿಯಾರ ಹಾಗೂ ಸಹ ಶಿಕ್ಷಕಿ ಸುರೇಖಾ ಡಿ. ಅವರ ಪ್ರಾಯೋಜಕತ್ವದಲ್ಲಿ ನೀಡಿದ ಬೇಬಿ ಚೇರ್ ಅನ್ನು ಶಾಲೆಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ದಾನಿಗಳನ್ನು ಗೌರವದಿಂದ ಸನ್ಮಾನಿಸಲಾಯಿತು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಹಿರಿಯ ವಿದ್ಯಾರ್ಥಿ ರಾಜೇಶ್ ರಾಣೆ, ಎಸ್‌ಡಿಎಂಸಿ ಉಪಾಧ್ಯಕ್ಷೆ ಪುಷ್ಪ ಹಾಗೂ ಶಾಲಾ ಮುಖ್ಯ ಶಿಕ್ಷಕ ಆಶಾ ಬಾನು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಆಶಾ ಬಾನು ಸ್ವಾಗತಿಸಿ, ಸಹ ಶಿಕ್ಷಕಿ ಸುಮ ದೇವಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿ ದಿನೇಶ್ ಆಚಾರ್ಯ ಸಹಕರಿಸಿದರು.
ಬೈಲೂರು ಮೈನ್ ಸ. ಹಿ. ಪ್ರಾ. ಶಾಲೆ : ಪ್ರಿಂಟರ್ – ಚೇರ್ ಹಸ್ತಾಂತರ









