ಅಂತಾರಾಷ್ಟ್ರೀಯ ತುಳುವ ಮಹಾಸಭಾ – ಗೋವಾ ಅಧ್ಯಕ್ಷರಾಗಿ ಗಣೇಶ್‌ ಶೆಟ್ಟಿ ಇರ್ವತ್ತೂರು

ಗೋವಾ : 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಅಂತಾರಾಷ್ಟ್ರೀಯ ತುಳುವ ಮಹಾಸಭಾ ಗೋವಾ ರಾಜ್ಯ ಅಧ್ಯಕ್ಷರಾಗಿ ಉದ್ಯಮಿ, ಸಾಮಾಜಿಕ ಮುಂದಾಳು, ತುಳುಕೂಟ ಗೋವಾದ ಅಧ್ಯಕ್ಷ ಗಣೇಶ್ ಶೆಟ್ಟಿ ಇರ್ವತ್ತೂರು ಆಯ್ಕೆಯಾಗಿದ್ದಾರೆ.

ಗೋವಾದಲ್ಲಿ ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಉಳಿವು-ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಗಣೇಶ್‌ ಶೆಟ್ಟಿ ಅವರು ತುಳುಕೂಟ ಗೋವಾ ಅಧ್ಯಕ್ಷರಾಗಿ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಸಮುದಾಯದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿ, ಗೋವಾದ ತುಳುವರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ಸಂಘಟನಾ ಕಾರ್ಯವನ್ನು ಪರಿಗಣಿಸಿ ತುಳುವ ಮಹಾಸಭಾದ ಅಂತಾರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕರ್ನಾಟಕ ರಾಜ್ಯ ಅಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ, ಕೇಂದ್ರೀಯ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ ಹಾಗೂ ಪ್ರಧಾನ ಕಾರ್ಯದರ್ಶಿ ಅರವಿಂದ ಬೆಳ್ಚಾಡ ಅವರು ಗಣೇಶ್‌ ಅವರನ್ನು ಆಯ್ಕೆ ಮಾಡಿರುತ್ತಾರೆ.





























































































































error: Content is protected !!
Scroll to Top