ಚೈತನ್ಯ ಕಲಾವಿದರು ಬೈಲೂರು ತಂಡದ ನೂತನ ನಾಟಕದ ಶೀರ್ಷಿಕೆ ಬಿಡುಗಡೆ

ಕಾರ್ಕಳ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೆಲಿಕೆದ ಅರಸೆ ಖ್ಯಾತ ಚಲನಚಿತ್ರ ನಟ, ರಂಗ ನಿರ್ದೇಶಕ, ಸಂಭಾಷಣೆಗಾರ ಬೈಲೂರು ಪ್ರಸನ್ನ ಶೆಟ್ಟಿ ಅವರ ಕಥೆ, ರಚನೆ ಮತ್ತು ನಿರ್ದೇಶನದ, ಚೈತನ್ಯ ಕಲಾವಿದರು ಬೈಲೂರು ತಂಡದ ನೂತನ ಹಾಸ್ಯಮಯ ತುಳು ನಾಟಕ ʼಊರು ಬೋಡು ಪುದರ್‌ ಬೊಡ್ಚಿʼ ಶೀರ್ಷಿಕೆ ಬಿಡುಗಡೆಗೊಂಡಿದೆ.

ತುಳುನಾಡಿನ ಪ್ರಖ್ಯಾತ ಪ್ರಶಂಸ, ರಂಗತರಂಗ ಮತ್ತು ಬಲೆತೆಲಿಪಾಲೆ ತಂಡಕ್ಕೆ ರಂಗ ನಿರ್ದೇಶನ ಮಾಡಿ, ಸಂಭಾಷಣೆಯನ್ನು ಬರೆದಿರುವ ಪ್ರಸನ್ನ ಶೆಟ್ಟಿ ಅವರು ಅನೇಕ ಸೂಪರ್‌ ಹಿಟ್‌ ನಾಟಕಗಳನ್ನು ರಚಿಸಿದ್ದಾರೆ. ತನ್ನ 14ನೇ ವಯಸ್ಸಿನಲ್ಲಿ ʼಸುಳಿಕು ತಿಕುದಿನ ಬದುಕ್ʼ ಎಂಬ ತುಳು ಹಾಸ್ಯಮಯ ನಾಟಕದೊಂದಿಗೆ ರಂಗಭೂಮಿ ಪ್ರವೇಶ ಮಾಡಿರುವ ಅವರು 8 ವರ್ಷ ನಿಟ್ಟೆ ನಮನ ಕಲಾವಿದೆರ್‌, ಪ್ರಸ್ತುತ 15 ವರ್ಷಗಳಿಂದ ಕಾಪು ರಂಗತರಂಗ ತಂಡದಲ್ಲಿ ಸಕ್ರಿಯರಾಗಿದ್ದು, ಹೊಸ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚೈತನ್ಯ ಕಲಾವಿದೆರ್‌ ಎನ್ನುವ ಹೊಸ ತಂಡವನ್ನು ಕಟ್ಟಿ ಕಳೆದ 12 ವರ್ಷದಿಂದ ಹಲವಾರು ನಾಟಕವನ್ನು ಬರೆದು, ನಿರ್ದೇಶನ ಮಾಡಿರುತ್ತಾರೆ. ತಂಡದ ದಶಸಂಭ್ರಮದ ನಾಟಕ ಅಷ್ಟೆಮಿ ತನ್ನ ವಿನೂತನ ಶೈಲಿಯೊಂದಿಗೆ ಬಾರೀ ಜನಮುಚ್ಚುಗೆ ಪಡೆದಿತ್ತು. ಕಳೆದ ವರ್ಷದ ರಾಘುಮಾಸ್ಟ್ರು ನಾಟಕವೂ ಜನಪ್ರಿಯತೆಗೆ ಪಾತ್ರವಾಗಿತ್ತು.





















error: Content is protected !!
Scroll to Top