ದೆಹಲಿ : ಕೇಂದ್ರ ಸರಕಾರ 39 ಅಗತ್ಯ ಔಷಧಿಗಳ ಬೆಲೆ ಇಳಿಕೆ ಮಾಡಿ, ದರ ನಿಗದಿಪಡಿಸಿ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರ ಮಹತ್ವದ ಆದೇಶ ಹೊರಡಿಸಿದ್ದು, ಬಿಪಿ, ಶುಗರ್, ಸೋಂಕುಗಳು, ಕಣ್ಣಿನ ಔಷಧಿ, ಅಸ್ವಸ್ಥತೆ ಹಾಗೂ ಉಸಿರಾಟದ ಖಾಯಿಲೆಯ ಔಷಧಿಯಂತಹ ದೀರ್ಘಕಾಲದ ಖಾಯಿಲೆಗಳಿಗೆ ಬಳಸುವ ಔಷಧಿಗಳ ದರವನ್ನು ಇಳಿಕೆ ಮಾಡಿದೆ.
ಇದರ ಜೊತೆಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ನಿಗದಿ ಮಾಡಿರುವ ದರಕ್ಕಿಂತ ಹೆಚ್ಚಿನ ಬೆಲೆಗೆ ಔಷಧಿಗಳನ್ನ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಔಷಧಿ ಮಾರಾಟ ಮಾಡಿದ್ರೆ ಬಡ್ಡಿ ಸಮೇತ ಮರುಪಾವತಿಸಬೇಕು ಹಾಗೂ ಔಷಧ ಬೆಲೆ ನಿಯಂತ್ರಣ ಆದೇಶ 2013 ಮತ್ತು ಅಗತ್ಯ ಸರಕುಗಳ ಕಾಯ್ದೆ 1955ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ತಿಳಿಸಿದೆ.
ಯಾವ ಮಾತ್ರೆಯ ಬೆಲೆ ಎಷ್ಟು?
ಮಧುಮೇಹ:
ಎಂಪಾಗ್ಲಿಫ್ಲೋಜಿನಾ, ಸಿಟಾಗ್ಲಿಪ್ಟಿನ್, ಮೆಟ್‌ಫಾರ್ಮಿನ್ ಹೈಡ್ರೋಕ್ಲೋರೈಡ್ ಮಾತ್ರೆಗಳ ಬೆಲೆ 14.88 ರೂ.ಯಿಂದ 17.17 ರೂ.
ಆಮ್ಲೋಡಿಪೈನ್, ಬಿಸೊಪ್ರೊಲೊಲ್, ಟೆಲ್ಮಿಸಾರ್ಟನ್ ಮಾತ್ರೆಯ ಬೆಲೆ 14.74 ರೂ.

ಕಣ್ಣಿನ ಸೋಂಕು ಮಾತ್ರೆಗಳು:
ನೆಪಾಫೆನಾಕ್, ಮೊಕ್ಸಿಫ್ಲೋಕ್ಸಾಸಿನ್ ಕಣ್ಣಿನ ಡ್ರಾಪ್ಸ್ ಪ್ರತಿ ಮಿಲಿ ಲೀಟರ್‌ಗೆ 68.64 ರೂ.
ಹೃದ್ರೋಗ ಮಾತ್ರೆಗಳು
ಕ್ಲೋಪಿಡೋಗ್ರೆಲ್, ಆಸ್ಪಿರಿನ್, ಅಟೊರ್ವಸ್ಟಾಟಿನ್ ಮಾತ್ರೆಯ ಬೆಲೆ 6 ರೂ.
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3ಗಳ ಪ್ರತಿ ಮಾತ್ರೆಯ ಗರಿಷ್ಠ ಬೆಲೆಯನ್ನು 8 ರೂ.
ನಾಯಿ ಕಡಿತಕ್ಕೆ ನೀಡುವ ಆಂಟಿ-ರೇಬಿಸ್ ಇಮ್ಯುನೊಗ್ಲೋಬ್ಯುಲಿನ್ ಇಂಜೆಕ್ಷನ್ ದರ 119.48 ರೂ.
ಹೃದಯಘಾತದ ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಬಳಸುವ ಪ್ರಾಣರಕ್ಷಕ `ಟೆನೆಕ್ಟೆಪ್ಲೇಸ್ ಇಂಜೆಕ್ಷನ್’ಗೆ 60,238.27 ರೂ. ಬೆಲೆ ನಿಗದಿ ಮಾಡಿದೆ.










