ಮಳೆಗಾಲದ ರೋಗಗಳು ಮತ್ತು ಆಯುರ್ವೇದ ಪರಿಹಾರಗಳು

ಮಳೆಗಾಲವು ಸಂತಸದ ಜೊತೆ ಅನೇಕ ರೋಗಗಳನ್ನು ಆಹ್ವಾನಿಸುತ್ತದೆ. ಈ ಕಾಲದಲ್ಲಿ ಕೆಲವು ಸಾಮಾನ್ಯವಾಗಿ ಬರುವಂತಹ ರೋಗಗಳ ಬಗ್ಗೆ ತಿಳಿದುಕೊಳ್ಳೋಣ.

1.ಜ್ವರ ಮತ್ತು ವೈರಲ್ ಜ್ವರ
ಕಾರಣ – ಹವಾಮಾನ ಬದಲಾವಣೆ, ತೇವಾಂಶ, ಸೊಳ್ಳೆಗಳಿಂದ ಜ್ವರ ಬರಬಹುದು.
ಲಕ್ಷಣ – ತಲೆನೋವು, ಮೈಕೈ ನೋವು, ಜ್ವರ, ಸುಸ್ತು ಕಾಣಬಹುದು.
– ಒಂದು ಗ್ಲಾಸ್ ನೀರಿಗೆ ತುಳಸಿ 10 ಎಲೆ, ಶುಂಠಿ, ಕರಿಮೆಣಸು 3, ಬೆಲ್ಲ ಹಾಕಿ ಅರ್ಧ ಗ್ಲಾಸ್ ಬರುವವರೆಗೆ ಕುದಿಸಿ ದಿನಕ್ಕೆ 2 ಬಾರಿ ಸೇವಿಸಿ. ಬೆಚ್ಚಗಿನ ನೀರು ಕುಡಿಯಿರಿ ವಿಶ್ರಾಂತಿ ತೆಗೆದುಕೊಳ್ಳಿ.

2.ಶೀತ, ಕೆಮ್ಮು, ಗಂಟಲು ನೋವು
ಕಾರಣಗಳು – ಕಫ ದೋಷ ಹೆಚ್ಚಳ.
ಲಕ್ಷಣ – ಮೂಗು ಕಟ್ಟುವುದು, ಕೆಮ್ಮು, ಗಂಟಲು ಕೆರೆತ

  • ಅರಿಶಿನ, ಜೇನುತುಪ್ಪ, ಬೆಚ್ಚಗಿನ ಹಾಲು ರಾತ್ರಿ ಕುಡಿಯಿರಿ. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ

3.ಹೊಟ್ಟೆ ಸಮಸ್ಯೆ – ಅಜೀರ್ಣ, ಭೇದಿ
ಕಾರಣ – ಮಂದ ಅಗ್ನಿ, ಕಲುಷಿತ ನೀರು ಮತ್ತು ಆಹಾರ
ಲಕ್ಷಣಗಳು – ವಾಂತಿ, ಭೇದಿ, ಹೊಟ್ಟೆ ನೋವು, ಜ್ವರ

  • ಜೀರಿಗೆ, ಓಮ, ಶುಂಠಿ ಹಾಕಿ ಕುದಿಸಿದ ನೀರು ಕುಡಿಯಿರಿ. ಮಜ್ಜಿಗೆ, ಮೊಸರು ಅನ್ನ ಲಘು ಆಹಾರ ಸೇವಿಸಿ.

4.ಚರ್ಮ ರೋಗಗಳು – ಫಂಗಸ್, ತುರಿಕೆ, ಅಲರ್ಜಿ
ಕಾರಣಗಳು – ತೇವಾಂಶ ಮತ್ತು ಬೆವರು
ಲಕ್ಷಣಗಳು – ಕಾಲು ಬೆರಳುಗಳ ನಡುವೆ ತುರಿಕೆ, ದದ್ದು, ಸೋಂಕು.

  • ಬೇವಿನ ಎಲೆ ಕುದಿಸಿದ ನೀರಿನಲ್ಲಿ ಸ್ನಾನ ಮಾಡಿ. ರಕ್ತ ಚಂದನ, ಬೇವು ಪುಡಿ, ರೋಸ್ ವಾಟರ್ ಲೇಪ ಹಚ್ಚಿರಿ. ಒದ್ದೆ ಬಟ್ಟೆ ತಕ್ಷಣ ಬದಲಾಯಿಸಿ.

5.ಕೀಲು ನೋವು ಮತ್ತು ಸಂಧಿವಾತ
ಕಾರಣ – ವಾತ ಪ್ರಕೋಪ
ಲಕ್ಷಣಗಳು – ಮೊಣಕಾಲು, ಕೈ-ಕಾಲು ನೋವು, ಊತ

  • ಎಳ್ಳೆಣ್ಣೆಯಿಂದ ಮಸಾಜ್ ಮಾಡಿ. ಒಂದು ಗ್ಲಾಸ್ ನೀರಿನಲ್ಲಿ ಒಂದು ಚಮಚ ಮೆಂತೆ ನೆನೆಸಿಟ್ಟು ಎಂಟು ಗಂಟೆಗಳ ನಂತರ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಶುಂಠಿ, ಬೆಳ್ಳುಳ್ಳಿ ಆಹಾರದಲ್ಲಿ ಸೇರಿಸಿ.

6.ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾ
ಜ್ವರ 3 ದಿನಕ್ಕಿಂತ ಹೆಚ್ಚು ಇದ್ದರೆ ತಕ್ಷಣ ವೈದ್ಯರ ಬಳಿ ಹೋಗಿ.

ಮಳೆಗಾಲದಲ್ಲಿ ಅನುಸರಿಸಬೇಕಾದ ಆಯುರ್ವೇದ ನಿಯಮಗಳು
ಬಿಸಿ, ಹಗುರ ಆಹಾರ ಸೇವಿಸಿ. ಖಿಚಡಿ, ಸಾರು, ರಾಗಿ ಗಂಜಿ, ಶುಂಠಿ ಚಹಾ ಒಳ್ಳೆಯದು. ತಣ್ಣಗಿನ ಪಾನೀಯ, ಐಸ್ ಕ್ರೀಂ, ಸಲಾಡ್, ಎಣ್ಣೆ ಪದಾರ್ಥಗಳಿಂದ ದೂರವಿರಿ. ಯಾವಾಗಲೂ ಕುದಿಸಿ ಆರಿಸಿದ ನೀರು ಮಾತ್ರ ಕುಡಿಯಿರಿ.
ಮಳೆಯಲ್ಲಿ ನೆನೆಯಬೇಡಿ. ವಾರಕ್ಕೆ 2 ಬಾರಿ ಎಳ್ಳೆಣ್ಣೆ ಅಭ್ಯಂಗ ಮಾಡಿ ಸ್ನಾನ ಮಾಡಿ. ಬೇಗ ಮಲಗಿ, ಬೇಗ ಏಳಿ. ಹಗಲು ನಿದ್ರೆ ಮಾಡಬೇಡಿ. ಮನೆ ಮತ್ತು ಸುತ್ತಮುತ್ತ ಸ್ವಚ್ಛತೆ ಇಟ್ಟುಕೊಳ್ಳಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ
ತುಳಸಿ 5 ಎಲೆ, ಶುಂಠಿ ಸಣ್ಣ ತುಂಡು, ಕರಿಮೆಣಸು 2, ದಾಲ್ಚಿನ್ನಿ ಚಿಕ್ಕ ತುಂಡು, ಬೆಲ್ಲ 2 ಲೋಟ ನೀರಿಗೆ ಎಲ್ಲವನ್ನು ಹಾಕಿ 1 ಲೋಟಕ್ಕೆ ಇಳಿಯುವವರೆಗೆ ಕುದಿಸಿ. ಬೆಳಿಗ್ಗೆ ಮತ್ತು ಸಂಜೆ ಕುಡಿಯಿರಿ.
ಜ್ವರ, ಭೇದಿ ಒಂದು ದಿನಕ್ಕಿಂತ ಹೆಚ್ಚು ಇದ್ದರೆ, ಅಥವಾ ರಕ್ತಸ್ರಾವ, ಉಸಿರಾಟ ತೊಂದರೆ ಇದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಮಕ್ಕಳು, ಗರ್ಭಿಣಿಯರು ಮತ್ತು ವಯಸ್ಸಾದವರು ಹೆಚ್ಚು ಎಚ್ಚರ ವಹಿಸಬೇಕು.





















error: Content is protected !!
Scroll to Top