ಹೆಬ್ರಿ : ಬ್ರಹ್ಮಾವರ ತಾಲೂಕು ನಾಲ್ಕೂರು ಗ್ರಾಮದ ಪ್ರಭಾಕರ್ ಶೆಟ್ಟಿ (45) ಅವರು ಜು. 5ರಂದು ಹೋಟೆಲ್ ಕೆಲಸಕ್ಕೆ ಹೋದವರು ಕಾಣೆಯಾಗಿದ್ದಾರೆ. ಅವರು ನಾರಾವಿಯ ಮನೆಯೊಂದಕ್ಕೆ ರೊಟ್ಟಿ ಮಾಡಲು ಹೋದವರು ಅಲ್ಲಿ ಕೆಲಸ ಮುಗಿದ ಬಳಿಕ ಕಾಣೆಯಾಗಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ 9900606909 (ಸುರೇಂದ್ರ ಶೆಟ್ಟಿ) ಅಥವಾ 99004 57170 (ಸೀತಾರಾಮ ಶೆಟ್ಟಿ) ಕರೆ ಮಾಡಿ ತಿಳಿಸಬೇಕು ಎಂದು ಸಂಬಂಧಿಕರು ಮನವಿ ಮಾಡಿಕೊಂಡಿದ್ದಾರೆ.
ವ್ಯಕ್ತಿ ನಾಪತ್ತೆ









