ಕಾರ್ಕಳ : ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾದ ನೂತನ ಅಧ್ಯಕ್ಷರಾಗಿ ಬಿ. ಪ್ರಕಾಶ್ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ಶಿಲ್ಪಿ ಭಾಸ್ಕರ್ ಬಿ. ಎಸ್. ಆಚಾರ್ಯ ಪುನಾರಾಯ್ಕೆಯಾಗಿದ್ದಾರೆ. ಪೆರ್ವಾಜೆ ವಿಶ್ವಕರ್ಮ ಸಮಾಜ ಭವನದಲ್ಲಿ ನಡೆದ ವಿಬಿಎಸ್ ಸಭಾದ ವಾರ್ಷಿಕ ಮಹಾಸಭೆ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರಾಗಿ ಅಶೋಕ್ ಆಚಾರ್ಯ, ಅಂಡಾರು, ಕೋಶಾಧ್ಯಕ್ಷರು – ಪಿ. ವಸಂತ್ ಆಚಾರ್ಯ, ಜೊತೆ ಕಾರ್ಯದರ್ಶಿ – ರಮೇಶ್ ಆಚಾರ್ಯ, ಕಾರ್ಕಳ, ಕ್ರೀಡಾ ಕಾರ್ಯದರ್ಶಿ – ಅರುಣ್ ಆಚಾರ್ಯ ಸಾಲ್ಮರ, ಉಪ ಕೋಶಾಧ್ಯಕ್ಷರು – ಜೈರಾಂ ಆಚಾರ್ಯ ಕಾರ್ಕಳ, ಸದಸ್ಯರಾಗಿ ಶಿಲ್ಪಿ ರಾಮಚಂದ್ರ ಆಚಾರ್ಯ, ಸುರೇಶ್ ಆಚಾರ್ಯ ನಿಟ್ಟೆ, ಸುಧಾಕರ ಆಚಾರ್ಯ ಬಂಗ್ಲೆಗುಡ್ಡೆ, ಸುರೇಶ್ ಆಚಾರ್ಯ ಸಾಲ್ಮರ, ಎಂ. ರಮೇಶ್ ಆಚಾರ್ಯ, ಎಂ. ಎಸ್. ಮೌನೇಶ್ ಆಚಾರ್ಯ, ಕೆ. ವಿಶ್ವನಾಥ ಆಚಾರ್ಯ ಹಾಗೂ ಕೆ. ದಿನೇಶ್ ಆಚಾರ್ಯ ಆಯ್ಕೆಯಾಗಿದ್ದಾರೆ.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್. ಮಾತನಾಡಿ, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಲಭ್ಯವಿರುವ ವಿವಿಧ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಸಮಾಜದ ಶೈಕ್ಷಣಿಕ ಚಟುವಟಿಕೆಗಳನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಉಪಸ್ಥಿತರಿದ್ದರು. ಬಿ. ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಶಿಲ್ಪಿ ಭಾಸ್ಕರ್ ಬಿ. ಎಸ್. ಆಚಾರ್ಯ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಪಿ. ವಸಂತ್ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಕೆ. ವಿಶ್ವನಾಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಅಶೋಕ್ ಆಚಾರ್ಯ ವಂದಿಸಿದರು.


ವ್ಯಕ್ತಿತ್ವ ವಿಕಸನ ಶಿಬಿರ – ಪ್ರತಿಭಾ ಪುರಸ್ಕಾರ
ಇದೇ ಸಂದರ್ಭ ವ್ಯಕ್ತಿತ್ವ ವಿಕಸನ ಶಿಬಿರ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ಮತ್ತು ದತ್ತಿನಿಧಿ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶಿಲ್ಪಿ ರಾಮಚಂದ್ರ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಯಶಸ್ವಿ ಜೀವನಕ್ಕೆ ಅವಶ್ಯ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ನೀತಾ ಶೆಟ್ಟಿ, ಶರತ್ ಹಾಗೂ ರಿಷಿ ಜೈನ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ವರದಿಯನ್ನು ಕೆ. ದಿನೇಶ್ ಆಚಾರ್ಯ ಮಂಡಿಸಿದರು. ಜಯರಾಮ ಆಚಾರ್ಯ ವಂದಿಸಿದರು.










































































