ಬೆಳ್ಳಂಬೆಳಗ್ಗೆ ‌ಮಂಗಳೂರಿನ ಮೀನುಗಾರಿಕಾ ಧಕ್ಕೆಗೆ ‌ ಭೇಟಿ ನೀಡಿದ ಸಿಎಂ ‌ಡಿ‌.ಕೆ. ಶಿವಕುಮಾರ್

ಮೀನುಗಾರರ ಸಮಸ್ಯೆಗಳ ಪರಿಶೀಲನೆಗೆ ಮುಂದಾದ ಮುಖ್ಯಮಂತ್ರಿಗಳು

ಮಂಗಳೂರು: ದಕ್ಷಿಣ ಕನ್ನಡ ಪ್ರವಾಸದಲ್ಲಿರುವ ಸಿ.ಎಂ. ಡಿ. ಕೆ. ಶಿವಕುಮಾರ್ ಅವರು ಇಂದು ಬೆಳಗ್ಗೆ ಮೀನುಗಾರಿಕಾ ಧಕ್ಕೆಗೆ ಭೇಟಿ ನೀಡಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದೆ ಕೆ ಪಿ ಸಿ ಸಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಮೀನುಗಾರರ ಸಮಸ್ಯೆಗಳನ್ನು ಕೇಳಿದ್ದೆ. ಈಗ ಅವುಗಳನ್ನು ಬಗೆಹರಿಸುವ ಕೆಲಸ ನಡೆಯಬೇಕಾಗಿದೆ. ಮೀನುಗಾರಿಕಾ ಅಸೋಸಿಯೇಶನ್ ನವರು ಸಹ ನನ್ನನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದರು. ಅದರ ಪರಿಶೀಲನೆಗೆ ಈಗ ತಾವೇ ಮೀನುಗಾರಿಕಾ ಧಕ್ಕೆಗೆ ಬಂದಿರುವುದಾಗಿ ಹೇಳಿದ್ದಾರೆ.

ಸಿ ಎಂ ಅವರು ಧಕ್ಕೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೀನುಗಾರಿಕಾ ಚಟುವಟಿಕೆಗಳು ಸ್ತಬ್ಧವಾಗಿತ್ತು. ಇದರಿಂದ ಸಿಟ್ಟುಗೊಂಡ ‌ಸಿಎಂ ಇಲ್ಲಿನ ವ್ಯವಹಾರಗಳು ನಿರಂತರವಾಗಿ ನಡೆಯುತ್ತಿರಬೇಕು. ಇಲ್ಲಿಗೆ ದೇಶದ ಹಲವು ಭಾಗಗಳಿಂದ ವ್ಯಾಪಾರಿಗಳು ಬರುತ್ತಾರೆ. ಸ್ವಲ್ಪ ತಡವಾದರೂ ಮೀನು ಕೆಡುವ ಸಾಧ್ಯತೆ ಇದೆ. ಇಲ್ಲಿ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದು ನಾನು ಜಿಲ್ಲಾಧಿಕಾರಿ ಮತ್ತು ಕಮಿಷನರ್‌ಗೆ ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸಂಪುಟ ಸಭೆಯಲ್ಲೂ ಮೀನುಗಾರರ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಜನರಿಗೆ ಅನುಕೂಲ ಆಗಬೇಕು. ಸಣ್ಣ ಮೀನುಗಾರರಿಗೂ ತೊಂದರೆ ಆಗಬಾರದು. ಮೀನುಗಾರಿಕೆ ದೊಡ್ಡ ಆರ್ಥಿಕ ಶಕ್ತಿ. ಮೀನುಗಾರರೆಲ್ಲರೂ ಸೌಹಾರ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಮೀನುಗಾರರ ವ್ಯವಹಾರ ನ್ಯಾಯಬದ್ಧವಾಗಿ ನಡೆಯಬೇಕು.ಇಲ್ಲೇನಾದರೂ ಮಾಫಿಯಾ ಇದೆಯಾ? ಇಲ್ಲಾಗಲಿ,ಕಾರವಾರದವರೆಗೆ ಮೀನುಗಾರರಿಗೆ ಯಾವ ರೀತಿಯ ಸಮಸ್ಯೆಗಳಿವೆ ಎನ್ನುವ ಬಗ್ಗೆ ವರದಿ ತರಿಸಿ ಪರಿಹಾರ ನೀಡುವ ಕೆಲಸ ಮಾಡುತ್ತೇವೆ. ಮೀನುಗಾರರು ಸಮಸ್ಯೆಗಳನ್ನು ಹೇಳಲು ಹಿಂಜರಿಯಬಹುದು. ಸಮಸ್ಯೆಗಳನ್ನು ಕಣ್ಣಾರೆ ನೋಡಬೇಕು ಎಂದು ನಾನೇ ಬೆಳಗ್ಗೆ ಐದು ಗಂಟೆಗೆ ಎದ್ದು ಬಂದಿದ್ದೇನೆ.ಮೀನುಗಾರರ ವ್ಯವಹಾರ ಸುಗಮವಾಗಿ ನಡೆಯಬೇಕು. ಯಾರಿಗೂ ತೊಂದರೆಯಾಗಬಾರದು.ನಾವು ನುಡಿದಂತೆ ನಡೆಯುವುದಾಗಿ ತಿಳಿಸಿದ್ದಾರೆ. ಆಳಿವೆ ಬಾಗಿಲಿನಲ್ಲಿ ಹೂಳು ಎತ್ತಿಲ್ಲ, ಅಲ್ಲೊಂದು ಬೋಟ್ ಬಿದ್ದಿದೆ. ಅದೇ ಸಾಕ್ಷಿ. ಡ್ರೆಜ್ಜಿಂಗ್ ಮಾಡಬೇಕಾಗಿದೆ. ಅನೇಕ ಸಲಹೆಗಳನ್ನು ನೀಡಿದ್ದಾರೆ. ಕೇಂದ್ರ ಸರಕಾರದ ಟೆಕ್ನಿಕಲ್ ಕಮಿಟಿಗೆ ತಿಳಿಸಿ ಯಾವ ರೀತಿಯಲ್ಲಿ ಪರಿಹಾರ ನೀಡಬೇಕು ಎನ್ನುವ ಕುರಿತು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.





















































































































































error: Content is protected !!
Scroll to Top