ಆಸ್ಪತ್ರೆಗೆ ಭೇಟಿ ನೀಡಿ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರ ಆರೋಗ್ಯ ವಿಚಾರಿಸಿದ ಸಚಿವ ಖಾದರ್

ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ | ಎಂ. ಎನ್. ರಾಜೇಂದ್ರ ಕುಮಾರ್‌ ಅವರು ಅನಾರೋಗ್ಯ ಕಾರಣ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಭೇಟಿ ಮಾಡಿದ ಸಚಿವ ಯು.ಟಿ. ಖಾದರ್ ಅವರು ಆರೋಗ್ಯ ವಿಚಾರಿಸಿದರು.

ರಾಜೇಂದ್ರ ಕುಮಾರ್ ಅವರ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಅವರ ಕುಟುಂಬ ಸದಸ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಂದ ಪಡೆದುಕೊಂಡರು. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.

ಸಚಿವ ಯು.ಟಿ. ಖಾದರ್ ಮತ್ತು ಡಾ| ಎಂ.ಎನ್. ರಾಜೇಂದ್ರ ಪ್ರಸಾದ್ ಅವರದ್ದು ಬಹಳ ಹಿಂದಿನಿಂದಲೇ ಬೆಳೆದು ಬಂದ ಆತ್ಮೀಯತೆಯಾಗಿದೆ. ಯು.ಟಿ. ಖಾದರ್ ಅವರ ಈ ಭೇಟಿ ರಾಜಕೀಯವಾಗಿರದೆ ಮಾನವೀಯತೆ, ಆತ್ಮೀಯತೆ ಮತ್ತು ಕಾಳಜಿಯ ಭೇಟಿಯಾಗಿತ್ತು ಎನ್ನುವುದು ಗಮನಾರ್ಹ.

ಸಚಿವರ ಭೇಟಿಯ‌ ವೇಳೆಗೆ ವೈದ್ಯ ಡಾ| ಕಿಶೋರ್, ಆಸ್ಪತ್ರೆಯ ಸಿಇಒ ಸುಧೀಂದ್ರ ಜಿ. ಭಟ್, ಪುತ್ರ ಮೇಘರಾಜ್ ಜೈನ್, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್‌ ರೈ ಬಾಲ್ಯೊಟ್ಟು, ಉದ್ಯಮಿಗಳಾದ ಜಯಪ್ರಕಾಶ್ ತುಂಬೆ, ಆಸಿಫ್ ಹಾಗೂ ಸುನಿಲ್ ಕುಮಾರ್ ಬಜಗೋಳಿ, ರಾಮಪ್ರಸಾದ್, ರಾಜೇಶ್ ಪೂಜಾರಿ, ರವಿ ಕುಮಾರ್, ಕೀತ್ ಸಲಿನ್ಸ್, ಬಾಲಕೃಷ್ಣ, ಚಿತ್ರಕುಮಾ‌ರ್ ಮೊದಲಾದವರು ಉಪಸ್ಥಿತರಿದ್ದರು.















































































error: Content is protected !!
Scroll to Top