ಇಮ್ಮಡಿ ರಾಜಧನ ವಸೂಲಿ ನೀತಿ ಕೈಬಿಡುವಂತೆ ಸರ್ಕಾರಕ್ಕೆ ಆಗ್ರಹ
ಬೆಂಗಳೂರು: ಒಂದೇ ವಸ್ತುವಿಗೆ ಎರಡು ಬಾರಿ ರಾಜ ಧನ ವಸೂಲಿ ಮಾಡುವುದನ್ನು ಕೈಬಿಡುವುದು ಮತ್ತು ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಇಂದಿನಿಂದ ( ಸೆ. 18) ಅನಿರ್ದಿಷ್ಟಾವಧಿ ಕ್ವಾರಿ, ಕ್ರಶರ್‌ಗಳನ್ನು ಬಂದ್ ಮಾಡುವುದಾಗಿ ಕರ್ನಾಟಕ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್, ಕ್ರಷರ್ ಮಾಲೀಕರ ಒಕ್ಕೂಟ ತಿಳಿಸಿದೆ.
ಸರ್ಕಾರ ಗಣಿ ಮಾಲಿಕರಿಂದ ಅಥವಾ ಅಂತಿಮ ಬಳಕೆದಾರರಿಂದ ಯಾವುದೇ ಒಂದು ಹಂತದಲ್ಲಿ ಮಾತ್ರ ರಾಜಧನ ಸಂಗ್ರಹಿಸಬೇಕು. ಏಕಮುಖ ರಾಜ ಜನ ಸಂಗ್ರಹ ವ್ಯವಸ್ಥೆ ಜಾರಿಗೊಳಿಸಿ ಇಮ್ಮಡಿ ರಾಜ ಧನ ವ್ಯವಸ್ಥೆಯನ್ನು ತಕ್ಷಣ ರದ್ದು ಮಾಡಿ ಸ್ಪಷ್ಟ ನಿಯಮ ಜಾರಿ ಮಾಡುವಂತೆ ಒಕ್ಕೂಟ ಆಗ್ರಹಿಸಿದೆ.

ಈ ಹಿನ್ನೆಲೆ ರಾಜ್ಯದ ಎಲ್ಲಾ ಗಣಿ ಮಾಲೀಕರು ಸ್ವಯಂ ಪ್ರೇರಿತರಾಗಿ ಈ ಬಂದ್‌ನಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶನ ಮಾಡುವಂತೆಯೂ ವಿನಂತಿಸಲಾಗಿದೆ.
ಈ ಮುಷ್ಕರದಿಂದ ರಾಜ್ಯದಲ್ಲಿ ನಿರ್ಮಾಣ ಕಾರ್ಯಗಳಲ್ಲಿಯೂ ವ್ಯತ್ಯಯವಾಗುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ. ಕಟ್ಟಡ, ರಸ್ತೆ, ನೀರಾವರಿಗೆ ಸಂಬಂಧಿಸಿದ ನಿರ್ಮಾಣಗಳಲ್ಲಿ ಜಲ್ಲಿ, ಎಮ್ ಸ್ಯಾಂಡ್ ಸಮಸ್ಯೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ.







































