ವೀರ ಯೋಧರಿಗೆ ರೈಲಿನ ಎಸಿ ಭೋಗಿಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

ನವದೆಹಲಿ: ರೈಲುಗಳ ಎಸಿ ಭೋಗಿಯಲ್ಲಿ ಶೌರ್ಯ ಪ್ರಶಸ್ತಿ ಪುರಸ್ಕೃತ ವೀರ ಯೋಧರಿಗೆ ಮತ್ತು ಅವರ ಅರ್ಹ ಕುಟುಂಬ ಸದಸ್ಯರಿಗೆ ಅಜೀವ ಉಚಿತ ಪ್ರಯಾಣ ಸೌಲಭ್ಯ ನವೆಂಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ಈ ಸೌಲಭ್ಯವು ಸೇನಾ ಪದಕ, ನೌಕಾ ಸೇನಾ ಪದಕ, ವಾಯುಸೇನಾ ಪದಕ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತಿ ಹೊಂದಿರುವ ಯೋಧರಿಗೆ ಅನ್ವಯಿಸುತ್ತದೆ.

ಪ್ರಶಸ್ತಿ ಪುರಸ್ಕೃತ ಯೋಧರು ಎಸಿ ಫಸ್ಟ್ ಕ್ಲಾಸ್, ಎಸಿ 2-ಟೈರ್ ಹಾಗೂ ಎಸಿ ಚೇರ್ ಕಾ‌ರ್ ಬೋಗಿಗಳಲ್ಲಿ ಆಜೀವವಾಗಿ ಉಚಿತವಾಗಿ ಪ್ರಯಾಣಿಸುವುದರ ಜೊತೆಗೆ ಒಬ್ಬ ಸಹಪ್ರಯಾಣಿಕರಿಗೂ ಉಚಿತ ಪ್ರಯಾಣಕ್ಕೆ ಅವಕಾಶವಿದೆ.

ಈ ಸೌಲಭ್ಯವು ಯೋಧರ ಪತಿ/ಪತ್ನಿಗೂ ಅನ್ವಯಿಸುತ್ತದೆ. ಯೋಧ ಹುತಾತ್ಮರಾದರೆ, ಅವರ ಪತ್ನಿ/ಪತಿ ಮರುಮದುವೆಯಾಗುವವರೆಗೂ ಈ ಸೌಲಭ್ಯ ಮುಂದುವರಿಯುತ್ತದೆ. ಅವಿವಾಹಿತ ಯೋಧರಾಗಿದ್ದರೆ ಅವರ ತಂದೆ-ತಾಯಿಗೆ ಈ ಉಚಿತ ಪ್ರಯಾಣದ ಹಕ್ಕು ಸಿಗಲಿದೆ.

ಯಾವುದೇ ಕಚೇರಿಗೆ ತೆರಳದೆ, ರೈಲ್ವೆಯ ಕನ್ಸೆಷನಲ್ ಕಾರ್ಡ್ ಪೋರ್ಟಲ್ (IRCCP) ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು ‘ಎಲೆಕ್ಟ್ರಾನಿಕ್ ಟ್ರಾವೆಲ್ ಪಾಸ್’ ಪಡೆಯಬಹುದು. ನ. 1 ರಿಂದ ಐಆರ್‌ಸಿಟಿಸಿ (IRCTC) ವೆಬ್‌ಸೈಟ್‌ ಮೂಲಕ ನೇರವಾಗಿ ಈ ಇ-ಪಾಸ್ ಬಳಸಿ ಉಚಿತ ಟಿಕೆಟ್ ಕಾಯ್ದಿರಿಸಬಹುದು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.



















































































































































error: Content is protected !!
Scroll to Top