ಮಲ್ಲಿಗೆ ಕೊಯ್ಯಲು ಹೋದ ಮಹಿಳೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು

ಕಾರ್ಕಳ: ಮಲ್ಲಿಗೆ ಕೊಯ್ಯಲು ಹೋದ ಮಹಿಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಘಟನೆ ನಿಟ್ಟೆ ಗ್ರಾಮದಲ್ಲಿ ನಡೆದಿದೆ.

ಲೀನಾ ಲೋಬೋ (72) ಎಂಬವರೇ ‌ಮೃತ ದುರ್ದೈವಿ.

ಲೀನಾ ಅವರು ಮಲ್ಲಿಗೆ ಕೃಷಿ ನಡೆಸುತ್ತಿದ್ದು ಇಂದು ಮುಂಜಾನೆ ಗೂ ಕೊಯ್ಯಲು ತೋಟಕ್ಕೆ ಹೋಗಿದ್ದಾರೆ. ಈ ವೇಳೆ ಮಲ್ಲಿಗೆ ಗಿಡಗಳ ಮೇಲೆ ಬಿದ್ದಿದ್ದ ‌ಎಲ್‌ಟಿ ವಯರ್ ಅನ್ನು ಸ್ಪರ್ಶಿಸಿ ಅವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಮನೆಯ ಸಮೀಪದಲ್ಲಿ ಒಂದು ವಿದ್ಯುತ್ ಕಂಬ ಎತ್ತರದಲ್ಲಿದ್ದು, ಇನ್ನೊಂದು ತಗ್ಗಿನಲ್ಲಿದೆ. ಇವುಗಳ ನಡುವಿನ ವಯರ್ ಕನೆಕ್ಷನ್ ಜೋತು ಬಿದ್ದಿದ್ದು, ಮೆಸ್ಕಾಂ ಇಲಾಖೆ ಈ ವರೆಗೂ ಮನವಿಗೆ ‌ಸ್ಪಂದಿಸಿಲ್ಲ. ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದಲೇ ಲೀನಾ ಅವರ ಸಾವು ಸಂಭವಿಸಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.



























































































































error: Content is protected !!
Scroll to Top