ನಾವು ಜನರ ಭಾವನೆಗಳ ಮೇಲೆ ರಾಜಕೀಯ ಮಾಡುವುದಿಲ್ಲ: ಸಿಎಂ ಡಿ.ಕೆ. ಶಿವಕುಮಾರ್

ಮಂಗಳೂರು: ನಮಗೆ ಜನರ ಬದುಕಿಗಿಂತ ರಾಜಕೀಯ ಮುಖ್ಯವಲ್ಲ .‌ಹಾಗಾಗಿ ಯಾವುದೇ ಪಕ್ಷದ ನಾಯಕರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಹೊರತು, ಜನರ ಭಾವನೆ ಮೇಲೆ ರಾಜಕೀಯ ಮಾಡುವುದಿಲ್ಲ. ಎಲ್ಲರ ಚಿಂತನೆಯಂತೆ ನಮ್ಮ ಸರ್ಕಾರ ಕೆಲಸ ಮಾಡುತ್ತದೆ ಎಂದು ಭರವಸೆ ನೀಡಿದರು.

ಗಾಂಧಿ ಅವರು ಉಳಿದುಕೊಂಡಿದ್ದ ಮನೆಗೆ ಹೋಗಿ ಅಲ್ಲಿ ಉಪಹಾರ ಸೇವಿಸಿದೆ. ಮಂಗಳೂರು ಬನ್ಸ್, ದೋಸೆ ಸವಿದೆ. ಜಿಲ್ಲಾಮಂತ್ರಿಗಳು ಎಲ್ಲಿ ಕರೆದುಕೊಂಡು ಹೋಗುತ್ತಾರೊ ಅಲ್ಲಿಗೆ ಹೋಗುವುದಾಗಿ ಅವರು ತಿಳಿಸಿದ್ದಾರೆ.















































































error: Content is protected !!
Scroll to Top