ಇಂದಿನಿಂದ ಜಪಾನಿನ ಐಚಿ ನಯಾಗೊದಲ್ಲಿ ಏಷ್ಯಾಡ್ ಕ್ರೀಡಾಕೂಟ ಆರಂಭ

ನವದೆಹಲಿ: ಜಪಾನಿನ ಐಚಿ ನಾಗೊಯಾದಲ್ಲಿ ಏಷ್ಯಾಡ್ ಎಂದು ಕರೆಯಲ್ಪಡುವ ಏಷ್ಯನ್ ಕ್ರೀಡಾಕೂಟದ 20 ನೇ ಆವೃತ್ತಿಯ ಪಂದ್ಯಾಟಗಳು ಇಂದಿನಿಂದ ಆರಂಭವಾಗಲಿದೆ.

ಉದ್ಘಾಟನೆಯಲ್ಲಿ ಭಾರತದ ಧ್ವಜಾಧಾರಿಯಾಗಿ ಒಲಿಂಪಿಯನ್ ಶೂಟರ್‌ ಮನು ಭಾಕರ್ ಅವರೊಂದಿಗೆ ಅನುಭವಿ ಕಬಡ್ಡಿ ಆಟಗಾರ ಪವನ್ ಸೆಹ್ರಾವತ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತದ ಧ್ವಜಾಧಾರಿಯಾಗಿ ಮೊದಲು ಆಯ್ಕೆಯಾಗಿದ್ದ ಖ್ಯಾತ ಶಾಟ್‌ಪುಟ್‌ ಪಟು ತಜೀಂದರ್ ಪಾಲ್ ಸಿಂಗ್‌ ತೂರ್‌ ಅವರನ್ನು ಕೊನೇ ಕ್ಷಣದಲ್ಲಿ ಬದಲು ಮಾಡಿರುವುದಾಗಿದೆ.

ಈ ಬಾರಿ ಭಾರತದ 503 ಅಥೀಟ್‌ಗಳು 36 ಸ್ಪರ್ಧೆಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸಲಿದ್ದಾರೆ. 265 ಸಿಬ್ಬಂದಿ ಮತ್ತು ಪದಾಧಿಕಾರಿಗಳು ಕ್ರೀಡಾಪಟುಗಳೊಂದಿಗೆ ಇರಲಿದ್ದಾರೆ. 2028ರ ಒಲಿಂಪಿಕ್ಸ್‌ ಪ್ರವೇಶಕ್ಕೆ ಅರ್ಹತೆ ಗಿಟ್ಟಿಸುವ ಅವಕಾಶವೂ ಇಲ್ಲಿದೆ. 2023ರಲ್ಲಿ ಚೀನಾದಲ್ಲಿ ನಡೆದಿದ್ದ ಕೂಟದಲ್ಲಿ ಭಾರತ ತಂಡವು 106 ಪದಕ ಜಯಿಸಿತ್ತು. ಈ ಬಾರಿ ಗೇಮ್ಸ್‌ನಲ್ಲಿ 43 ಕ್ರೀಡೆಗಳಿವೆ. ಒಟ್ಟು 71 ವಿಭಾಗಗಳಲ್ಲಿ 469 ಪದಕ ಸ್ಪರ್ಧೆಗಳು ನಡೆಯಲಿವೆ. 10 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳಿದ್ದಾರೆ.

ಒಟ್ಟು ಹದಿನಾರು ದಿನಗಳ ಕಾಲ ಈ ಕ್ರೀಡಾಕೂಟ ನಡೆಯಲಿದೆ. ಇದರಲ್ಲಿ ಏಷ್ಯಾ ಖಂಡದಲ್ಲಿನ ಸುಮಾರು 45 ರಾಷ್ಟ್ರಗಳಿಂದ 11 ಸಾವಿರ ಮಂದಿ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.



















































































































































error: Content is protected !!
Scroll to Top