ಕಾರ್ಕಳ: ಸ್ಥಳೀಯ ಬೈಪಾಸ್ ಸರ್ಕಲ್ ಬಳಿ ಮೇ 1 ರಿಂದ ಸಾಕುಪ್ರಾಣಿಗಳ ವೈವಿಧ್ಯಮಯ ಲೋಕ ‘ದ ಪೆಟ್ ಶಾಪ್’ ಹಾಗೂ ಪಾದರಕ್ಷೆಗಳ ನೂತನ ಮಳಿಗೆ ‘ಐಕ್ಯ ಫುಟ್‌ವೇರ್ ಆಂಡ್ ಶಾಪಿಂಗ್’ ಏಕಕಾಲಕ್ಕೆ ಗ್ರಾಹಕರಿಗೆ ಮುಕ್ತವಾಗಲಿವೆ.
ವೈವಿಧ್ಯಮಯ ಸಾಕುಪ್ರಾಣಿಗಳ ಲೋಕ:
‘ದ ಪೆಟ್ ಶಾಪ್’ನಲ್ಲಿ ಎಲ್ಲಾ ತಳಿಯ ನಾಯಿಗಳು, ಪರ್ಷಿಯನ್ ಬೆಕ್ಕುಗಳು ಹಾಗೂ ಆಕರ್ಷಕ ವಿದೇಶಿ ಹಕ್ಕಿಗಳು ಲಭ್ಯವಿವೆ. ಅಕ್ವೇರಿಯಂ ಪ್ರಿಯರಿಗಾಗಿ ಅಲಂಕಾರಿಕ ಮೀನುಗಳು, ವಿವಿಧ ವಿನ್ಯಾಸದ ಅಕ್ವೇರಿಯಂಗಳು, ಪಂಜರಗಳು ಹಾಗೂ ಆಟಿಕೆಗಳ ಸಂಗ್ರಹ ಇಲ್ಲಿದೆ. ಪ್ರಾಣಿ ಹಾಗೂ ಪಕ್ಷಿಗಳ ಆಹಾರ ಮತ್ತು ಪೂರಕ ಪರಿಕರಗಳು ಸಗಟು ಹಾಗೂ ಚಿಲ್ಲರೆ ದರದಲ್ಲಿ ದೊರೆಯಲಿವೆ.
ನವನವೀನ ಪಾದರಕ್ಷೆಗಳ ಸಂಗ್ರಹ:
ಇದೇ ಆವರಣದಲ್ಲಿ ಶುಭಾರಂಭಗೊಳ್ಳಲಿರುವ ‘ಐಕ್ಯ ಫುಟ್ ವೇರ್’ನಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ನವನವೀನ ವಿನ್ಯಾಸದ ಪಾದರಕ್ಷೆಗಳು ಲಭ್ಯವಿವೆ. ವಿಶೇಷವಾಗಿ ‘ಫ್ಯಾನ್ಸಿ ಕಲೆಕ್ಷನ್’, ವೈವಾಹಿಕ ಕಾರ್ಯಕ್ರಮಗಳಿಗಾಗಿ ‘ಬ್ರೈಡಲ್ ಕಲೆಕ್ಷನ್’ ಹಾಗೂ ಎಲ್ಲಾ ಋತುಮಾನಗಳಿಗೆ ಒಪ್ಪುವಂತಹ ಗುಣಮಟ್ಟದ ಪಾದರಕ್ಷೆಗಳ ಬೃಹತ್ ಸಂಗ್ರಹ ಇಲ್ಲಿದೆ.
ಮೇ 1 ರಿಂದ ‘ದ ಪೆಟ್ ಶಾಪ್’ ಮತ್ತು ‘ಐಕ್ಯ ಫುಟ್‌ವೇರ್’ ಶುಭಾರಂಭ































