ಕಾರ್ಕಳ : 33/11 ಕೆವಿ ಬಜಗೋಳಿ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಹೊಸ್ಮಾರು, ನೆಲ್ಲಿಕಾರು ಫೀಡರ್‌ಗಳಲ್ಲಿ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಎ. 25ರಂದು ಬೆಳಿಗ್ಗೆ 9ರಿಂದ ಅಪರಾಹ್ನ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. ಹೀಗಾಗಿ ನೆಲ್ಲಿಕಾರು, ಚಂಡೆ ಬಸದಿ, ಪುಚ್ಚಬೆಟ್ಟು, ಜ್ಯೋತಿ ನಗರ, ನಲ್ಲೂರು ಪೇರಲ್ಕೆ, ಪೆರ್ನೊಡಿ, ಹೊಸ್ಮಾರು ಟೌನ್, ಈದು, ನೂರಾಳ್ ಬೆಟ್ಟು ಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಎ. 25 : ಹೊಸ್ಮಾರು-ನೆಲ್ಲಿಕಾರು ಭಾಗದಲ್ಲಿ ವಿದ್ಯುತ್ ವ್ಯತ್ಯಯ















































