11 ತಿಂಗಳಲ್ಲೇ ಪಡುಬಿದ್ರಿ ದೇಗುಲ ನಿರ್ಮಾಣ

ಪ್ರಶಂಸೆಗೆ ಪಾತ್ರರಾದರು ಎಸ್‌ಕೆಎಸ್‌ನ ಸುಜಯ್ ಕುಮಾರ್ ಶೆಟ್ಟಿ

ಉಡುಪಿ : ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಕೇವಲ 11 ತಿಂಗಳಲ್ಲೇ ಪೂರ್ಣಗೊಂಡು ಇದೀಗ ಬ್ರಹ್ಮಕಲಶೋತ್ಸವ ಜರುಗುತ್ತಿದೆ. ಎಸ್‌ಕೆಎಸ್‌ ಇನ್ಫ್ರಾ ಪ್ರಾಜೆಕ್ಟ್‌ ಪೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸುಜಯ್ ಕುಮಾರ್ ಶೆಟ್ಟಿ ಅವರು ದೇಗುಲ ಜೀರ್ಣೊದ್ಧಾರ ಕಾಮಗಾರಿ ಗುತ್ತಿಗೆ ವಹಿಸಿದ್ದರು. ಕಾಷ್ಟ ಶಿಲ್ಪದ ಸೌಂದರ್ಯದೊಂದಿಗೆ ಅತ್ಯಂತ ಸುಂದರವಾಗಿ ದೇವಸ್ಥಾನ ನಿರ್ಮಣವಾಗಿತ್ತು.
2023ರ ಮಾರ್ಚ್‌ ತಿಂಗಳಲ್ಲಿ ಬ್ರಹ್ಮಕಲಶಗೊಂಡ ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನವನ್ನೂ 9 ತಿಂಗಳ ಅವಧಿಯಲ್ಲೇ ಪೂರ್ಣಗೊಳಿಸಿ ಭಕ್ತರ ಪ್ರಶಂಸೆಗೆ ಪಾತ್ರರಾಗಿದ್ದ ಸುಜಯ ಕುಮಾರ್ ಶೆಟ್ಟಿ ಅವರು‌ ಇದೀಗ ಪಡುಬಿದ್ರಿ ದೇವಸ್ಥಾನವನ್ನೂ 11 ತಿಂಗಳಲ್ಲಿ ನಿರ್ಮಿಸಿ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಿದ್ದಾರೆ. ಹಸ್ತಾಂತರ ಕಾರ್ಯಕ್ರಮದಲ್ಲಿ ​ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಎಂ.ಆರ್.ಜಿ. ಗ್ರೂಪ್‌ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.





























































































error: Content is protected !!
Scroll to Top