ಜನಹಿತಕ್ಕೆ ವಿರುದ್ಧವಾಗಿರುವ ಕಾಯ್ದೆ ಹಿಂಪಡೆಯುವಂತೆ ಶ್ರೀ ಶಿವಾಚಾರ್ಯ ಸ್ವಾಮೀಜಿ ಸಲಹೆ
ಶಿವಮೊಗ್ಗ : ಮಹಿಳೆಯರು ಇತ್ತೀಚಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದು, ಇದರಿಂದಾಗಿ ಕುಟುಂಬಗಳು ಒಡೆಯುತ್ತಿವೆ. ಜನಹಿತಕ್ಕೆ ವಿರುದ್ಧವಾದ ಈ ಕಾಯ್ದೆ ಹಿಂಪಡೆಯಬೇಕು ಎಂದು ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಹೊಳೆಹೊನ್ನೂರು ಸಮೀಪದ ಯಡೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಸ್ವಾಮೀಜಿ ತಂದೆ-ತಾಯಿ, ಅಣ್ಣ-ತಮ್ಮಂದಿರು, ಸಹೋದರಿ ಮದುವೆಗಾಗಿ ಸಾಲ ಮಾಡಿರುತ್ತಾರೆ. ಆಸ್ತಿಯನ್ನೂ ಮಾರಾಟ ಮಾಡಿರುತ್ತಾರೆ. ಆದರೂ ಉಳಿದ ಆಸ್ತಿಯಲ್ಲಿ ಪಾಲು ಕೇಳುವುದು ತಪ್ಪು. ಸರಕಾರ, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಚಿಂತಿಸಿ, ಈಗಿರುವ ಕಾನೂನು ತೆಗೆದುಹಾಕಬೇಕು ಎಂದವರು ಸಲಹೆ ನೀಡಿದರು.







































