ಉಡುಪಿ : ರೌಡಿ ಶೀಟರ್, ಗರುಡ ಗ್ಯಾಂಗ್‌ನ ಸದಸ್ಯ ಕಿರಿಮಂಜೇಶ್ವರ ಅರೆಹೊಳೆ ಕ್ರಾಸ್‌ನ ಅಲ್ಫಾಝ್ (25) ನನ್ನು ಬೈಂದೂರು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ. ಉಡುಪಿ ಎಸ್‌ಪಿ ಡಾ. ಹರಿರಾಂ ಶಂಕರ್ ಅವರ ವರದಿಯ ಮೇರೆಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಎ.24ರಂದು ಈ ಆದೇಶ ಹೊರಡಿಸಿದ್ದಾರೆ.
ಅಲ್ಫಾಝ್ ಹೆಸರಲ್ಲಿ ಉಡುಪಿ ಜಿಲ್ಲೆಯ ಶಿರ್ವ, ಗಂಗೊಳ್ಳಿ, ಬೈಂದೂರು, ಉಡುಪಿ ನಗರ, ಕುಂದಾಪುರ ಗ್ರಾಮಾಂತರ, ಕುಂದಾಪುರ ನಗರ ಠಾಣೆಯಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ 2 ಕೊಲೆಯತ್ನ, 1 ದರೋಡೆ, 1 ದರೋಡೆ ಯತ್ನ, 1 ಹಲ್ಲೆ, 2 ಅಕ್ರಮ ಕೂಟ, 1 ಅಪಹರಣ, 1 ಮಾದಕ ವಸ್ತು ಮಾರಾಟ ಹಾಗೂ 1 ಇತರ ಪ್ರಕರಣ ಸೇರಿದಂತೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಅವುಗಳ ಪೈಕಿ ಒಂದು ಪ್ರಕರಣದಲ್ಲಿ ಆತ ಖುಲಾಸೆಯಾಗಿದ್ದು, 8 ಪ್ರಕರಣ ನ್ಯಾಯಾಲಯ ವಿಚಾರಣೆಯಲ್ಲಿದೆ. ಉಳಿದ ಒಂದು ಪ್ರಕರಣ ತನಿಖೆಯಲ್ಲಿದೆ. ಬಂಧಿತ ಆರೋಪಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹ ದಲ್ಲಿ ಬಂಧನದಲ್ಲಿರಿಸಲು ಆದೇಶಿಸಲಾಗಿದೆ.
ಗೂಂಡಾ ಕಾಯ್ದೆಯಡಿ ಗರುಡ ಗ್ಯಾಂಗ್‌ನ ಸದಸ್ಯ ಅಲ್ಫಾಝ್ ಬಂಧನ

















































