617 ಅಂಕಗಳನ್ನು ಪಡೆದ ಶ್ರೀಶಾ ಪ್ರಭು ರಾಜ್ಯಕ್ಕೆ 9ನೇ ರ‍್ಯಾಂಕ್
18 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿಕ ಅಂಕ – 95 ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿ
ಕಾರ್ಕಳ : ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತೊಮ್ಮೆ 100% ಶೇಕಡಾ ಫಲಿತಾಂಶದೊಂದಿಗೆ ಸತತ 17ನೇ ಬಾರಿಗೆ ಈ ಸಾಧನೆ ಮಾಡಿದೆ. ಕೆ. ಶ್ರೀಶಾ ಪ್ರಭು 625ಕ್ಕೆ 617 ಅಂಕಗಳನ್ನು ಪಡೆದು ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ. 18 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು 159 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 95 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ಉಳಿದಂತೆ 62 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪರೀಕ್ಷೆ ಬರೆದ ಸಂಸ್ಥೆಯ 98.74 % ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದಂತಾಗಿದೆ. ಒಟ್ಟು 58 ವಿದ್ಯಾರ್ಥಿಗಳು ಎ+ ಅಂದರೆ 90 ಶೇಕಡಾಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ.

ಕೆ. ಶ್ರೀಶಾ ಪ್ರಭು 617, ಅನುಶ್ರೀ ಪ್ರಭು 611, ಆಯಿಷಾ ರೂಬಾ 608, ಧನ್ವಿ ಗಣೇಶ್ ಶೆಟ್ಟಿ 608, ಟಿಸ್ಸಾ ಅಲ್ಫೋನ್ಸಾ ಆಗಸ್ಟೀನ್ 607, ಆದ್ಯಾ ಸುಧೀರ್ ಜೈನ್ 605, ಗೌತಮಿ ಪ್ರಭಾಕರ್ ಶೆಟ್ಟಿ 605, ಲೆನಿಶಾ ಡಿಸೋಜ 604, ನೋರ್ವಿನ್ ಮೆಂಡೋನ್ಸಾ 604, ಸಾನ್ವಿ ಸತೀಶ್ ಶೆಟ್ಟಿ 604, ಸ್ಲಾನಿಯಾ ನಿಸೆಲ್ ನೊರೋನ್ಹಾ 604, ಆರುಷ್ ಎಸ್. ಶೆಟ್ಟಿ 603, ಫಾತಿಮಾ ಶಿಫಾನಾ 603, ಕವನ ಕೆ ಮೂಲ್ಯ 603, ಸಾನ್ವಿ ಮಾರ್ಟಿಸ್ 602, ಅನಿಷಾ ಡಿಸೋಜ 601, ಲೆನಿಶಾ ಲಿಯಾನ್ನಾ ಮೆಂಡೋನ್ಸಾ 601 ಹಾಗೂ ಶಹನುಮ್ ಫಾತಿಮಾ 601 ಅಂಕಗಳನ್ನು ಪಡೆದಿದ್ದಾರೆ. ಕನ್ನಡದಲ್ಲಿ 25, ಹಿಂದಿಯಲ್ಲಿ 21, ಗಣಿತದಲ್ಲಿ 1 ಹಾಗೂ ಸಮಾಜ ವಿಜ್ಞಾನದಲ್ಲಿ 7 ಹೀಗೆ ಒಟ್ಟು 54 ವಿಷಯವಾರು ನೂರಕ್ಕೆ ನೂರು ಅಂಕಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.






































