ಉಡುಪಿ : ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕುಂದಾಪುರದ ಶಂಕರನಾರಾಯಣ ಮದರ್ ತೆರೇಸಾ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಪ್ರೀತಂ ಜಿ. ಪೂಜಾರಿ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಸಾಧನೆ ಮೆರೆದಿದ್ದಾರೆ. 625 ಅಂಕ ಪಡೆದ ಏಳು ಮಂದಿ ವಿದ್ಯಾರ್ಥಿಗಳ ಪೈಕಿ ಪ್ರೀತಂ ಒಬ್ಬನಾಗಿದ್ದಾನೆ. ಪ್ರೀತಂ ಖಾಸಗಿ ಬಸ್ ಕಂಡಕ್ಟರ್ ಆಗಿರುವ ಗಣಪತಿ ಪೂಜಾರಿ ಮತ್ತು ನಾಗರತ್ನ ದಂಪತಿ ಪುತ್ರ.
625 ಅಂಕ ಪಡೆದಿರುವ ಕುರಿತು ಅತೀವ ಹೆಮ್ಮೆ ಸಂತಸವಿದೆ. ತಂದೆ, ತಾಯಿ ಮತ್ತು ಶಾಲೆಯಲ್ಲಿ ಶಿಕ್ಷಕರು ಸಹಕಾರ ನೀಡಿದ ಕಾರಣ ಸಾಧನೆ ಮಾಡುವಂತಾಯಿತು ಎಂದು ಪ್ರೀತಂ ಪ್ರತಿಕ್ರಿಯಿಸಿದರು. ಪ್ರತಿದಿನವೂ ಉತ್ತಮವಾಗಿ ತಯಾರಿ ನಡೆಸುತ್ತಿದ್ದೆ. ಕ್ರಮಬದ್ದ ಯೋಜನೆ ರೂಪಿಸಿಕೊಂಡಿದ್ದೆ. ಎಲ್ಲರ ನಿರೀಕ್ಷೆಯೂ ಇಂದು ಸಾಕಾರಗೊಂಡಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಿಂದ ಅಭಿನಂದನೆ
ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಂದಾಪುರದ ಶಂಕರನಾರಾಯಣ ಮದರ್ ಥೆರೇಸಾ ಮೆಮೋರಿಯಲ್ ಸ್ಕೂಲ್‌ನ ಪ್ರೀತಮ್ ಜಿ. ಪೂಜಾರಿ ಅವರನ್ನು ಸಚಿವರು ಅಭಿನಂದಿಸಿದ್ದಾರೆ.





























































