ಕಾರ್ಕಳ: ತಾಲೂಕಿನ ಈದು ಗ್ರಾಮದ ನಿವಾಸಿಯೊಬ್ಬರು ಸೋಮವಾರ ಕೆಲಸದ ಮನೆಯಲ್ಲೇ ತೀವ್ರ ಅಸ್ವಸ್ಥಗೊಂಡು ಮೃತಪಟ್ಟ ಪಟ್ಟಿದ್ದಾರೆ.
ಈದು ನಿವಾಸಿ ಆನಂದ (58) ಮೃತಪಟ್ಟವರು. ಕಳೆದ ಏಳು ತಿಂಗಳಿನಿಂದ ನಿಟ್ಟೆ ಗ್ರಾಮದ ಬಜಕಳ ಹೊಸಮನೆ ಗುತ್ತಿನ ಸುಮಿತ್ರಾ ಹೆಗ್ಡೆ ಎಂಬುವವರ ಮನೆಯಲ್ಲಿ ಇವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಎಂಟು ವರ್ಷಗಳಿಂದ ಅವರು ಕುಟುಂಬದಿಂದ ಪ್ರತ್ಯೇಕವಾಗಿ ವಾಸವಿದ್ದರು ಎಂದು ತಿಳಿದುಬಂದಿದೆ.
ಸೋಮವಾರ ಬೆಳಿಗ್ಗೆ 10:30ರ ಸುಮಾರಿಗೆ ಮಲಗಿದ್ದ ಆನಂದ ಅವರು ಎದ್ದಿರಲಿಲ್ಲ. ಸುಮಿತ್ರಾ ಹೆಗ್ಡೆ ಅವರು ಎಬ್ಬಿಸಲು ಹೋದಾಗ ಆನಂದ ಅವರು ತೀವ್ರ ಅಸ್ವಸ್ಥಗೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಕಾರ್ಕಳದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮೃತರ ಪುತ್ರ ಚಂದ್ರಹಾಸ ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕನ ಅಸಹಜ ಸಾವು































