ಹೆಬ್ರಿ : ಬಾಲ್ಯದಲ್ಲಿ ನೀಡಿದ ಸಂಸ್ಕಾರ, ಶಿಕ್ಷಣ ಭವಿಷ್ಯದಲ್ಲಿ ಮಹತ್ತರ ಪಾತ್ರ ವಹಿಸಲಿದೆ. ಎಳವೆಯಲ್ಲೇ ಮಕ್ಕಳಿಗೆ ಧಾರ್ಮಿಕ ವಿಚಾರವನ್ನು ತಿಳಿಸಿಕೊಡುವ ಮೂಲಕ ಆದರ್ಶ ವ್ಯಕ್ತಿತ್ವ ತುಂಬುವ ಕಾರ್ಯವಾಗಬೇಕೆಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಅವರು ಎ. 21ರಂದು ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಶ್ರೀ ಪೇಜಾವರ ಮಠ, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಬೆಂಗಳೂರು, ಶಿಬಿರ ಸಮಿತಿ ಹೆಬ್ರಿ ಸಹಯೋಗದಲ್ಲಿ ನಡೆಯುತ್ತಿರುವ ಧಾರ್ಮಿಕ ಶಿಕ್ಷಣ ಶಿಬಿರದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಗೋಶಾಲೆ ಟ್ರಸ್ಟ್ ನ ವಿದ್ವಾನ್ ಪದ್ಮನಾಭ ಆಚಾರ್ಯ, ವಿದ್ವಾನ್ ವಿಷ್ಣುಮೂರ್ತಿ ಆಚಾರ್ಯ ಗಿಲ್ಲಾಳಿ, ಶಿಬಿರ ಸಮಿತಿಯ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ, ಸುದರ್ಶನ ಕಲ್ಕೂರ್, ಚಂದ್ರಶೇಖರ ಭಟ್ ಬಲ್ಲಾಡಿ, ವಿದ್ವಾನ್ ರಾಘವೇಂದ್ರ ಅಡಿಗ ಮತ್ತು ಶಿಬಿರದ ಅಧ್ಯಾಪಕರಾದ ಶ್ರೀವಾಸ ಆಚಾರ್ಯ, ಶ್ರೀಧಾಮ ಆಚಾರ್ಯ, ಶ್ರೀವತ್ಸ, ಸುಬ್ರಹ್ಮಣ್ಯ ಅಡಿಗ, ಅಮೋಘ ಭಟ್ ಮತ್ತು ಹರೀಶ್ ಭಟ್, ಪೋಷಕರು ಉಪಸ್ಥಿತರಿದ್ದರು.
ಮಕ್ಕಳಿಗೆ ಧಾರ್ಮಿಕ ವಿಚಾರ ತಿಳಿಸಿಕೊಡುವ ಕಾರ್ಯವಾಗಲಿ – ಪೇಜಾವರ ಶ್ರೀ






































