ಉಡುಪಿ ಜ್ಞಾನಸುಧಾ : ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ : ಪ್ರಥಮ ಪಿಯುಸಿಯಲ್ಲಿ ಎಲ್ಲರನ್ನೂ ತೇರ್ಗಡೆಗೊಳಿಸಿ ದ್ವಿತೀಯ ಪಿಯುಸಿಯಲ್ಲಿ ಶೇ. 100 ಫಲಿತಾಂಶ ದಾಖಲಾಗಿರುವುದು ಜ್ಞಾನಸುಧಾದ ಹಿರಿಮೆ ಎಂದು ಅಜೆಕಾರ್‌ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಹೇಳಿದರು.
ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಅಂಕಗಳ ಜೊತೆಗೆ ನಮಗೆ ಸರ್ವಸ್ವವನ್ನು ನೀಡುವ ಸಮಾಜ, ತಂದೆ ತಾಯಿ, ದೇಶವನ್ನು ಹೇಗೆ ಗೌರವಿಬೇಕು ಎಂಬುದನ್ನು ತಿಳಿದಿರಬೇಕು. ವಿದ್ಯಾರ್ಥಿಗಳನ್ನು ಈ ದೇಶದ ಆಸ್ತಿಯನ್ನಾಗಿ ಮಾಡುವ ನನ್ನ ಸಂಕಲ್ಪ ಶುದ್ಧವಾಗಿತ್ತು. ಆದ್ದರಿಂದ ಅದು ಸಿದ್ಧಿಯಾಗಿದೆ ಎಂದವರು ಹೇಳಿದರು.

ಸ್ಪರ್ಧಾತ್ಮಕ ಜಗತ್ತಿಗೆ ಅಣಿಯಾಗಬೇಕು
ಟ್ರಸ್ಟಿ ಅನಿಲ್ ಕುಮಾರ್ ಜೈನ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿಗೆ ನಮ್ಮನ್ನು ನಾವು ಅಣಿಗೊಳಿಸುವುದು ಅಗತ್ಯ. ಈ ಫಲಿತಾಂಶ ಮುಂದಿನ ಪರೀಕ್ಷೆಗಳಿಗೆ ಇನ್ನಷ್ಟು ಸ್ಫೂರ್ತಿಯಾಗಲಿದೆ ಎಂದರು. ಜ್ಞಾನಸುಧಾದಲ್ಲಿ ಅನೇಕ ರೀತಿಯ ವಿದ್ಯಾರ್ಥಿ ವೇತನಗಳಿವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 98ಕ್ಕಿಂತ ಅಧಿಕ ಪಡೆದ ವಿದ್ಯಾರ್ಥಿಗಳಾದ ಆರ್ನವಿ (597), ಪ್ರಥ್ವಿತಾ ಪಿ. ಶೆಟ್ಟಿ (596), ನಿಶ್ಮಿತಾ (594), ಚಿನ್ಮಯಿ ಭಟ್ (593), ಪ್ರೀತಮ್ ಕೆ. ಎಂ. (592), ಯಶಸ್ವಿನಿ ಬಾರ್ಕೂರು (592), ಮಹಿಮಾ (591), ಶ್ರೀಯಾ ಎಸ್. ಆಚಾರ್ (591), ದೀಪಶ್ರೀ ರಮೇಶ್ ಶೇರ್ವೆಗಾರ್ (590), ಡೆಲಿಷಿಯಾ ಎಂ. (590), ಪ್ರಗತಿ ಎಲ್. ಕೋಟ್ಯಾನ್ (590), ಶ್ರೀನಿಧಿ ಎಂ. ಮೊಗವೀರ (589), ತನಿಷ್ಕಾ ಕೆ. ಶೆಟ್ಟಿ (589), ಮಾಧವ ಕಾಮತ್ (588), ಶ್ಲೋಕ ನವೀನ್ ಶೆಟ್ಟಿ (588), ಟಿ. ಕಿಶನ್ ಗಣೇಶ್ (588) ಅವರನ್ನು ಸನ್ಮಾನಿಸಲಾಯಿತು.
ಅಜೆಕಾರ್ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ‌ ಸಂತೋಷ್, ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀನಿಧಿ ಭಾಗವತ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಕಾಡಮಿಕ್ ಡೀನ್ ಡಾ. ಮಿಥುನ್ ಯು., ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ, ವಿವಿಧ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.

































































error: Content is protected !!
Scroll to Top