ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಇಸ್ರೇಲ್-ಲೆಬನಾನ್ ಯುದ್ಧಕ್ಕೆ ಮಾತುಕತೆ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 10 ದಿನಗಳ ಕದನವಿರಾಮ ಘೋಷಿಸಿದ್ದಾರೆ. ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.
ಆದರೆ ಇರಾನ್ ಈ ಹೇಳಿಕೆಯನ್ನು ತಿರಸ್ಕರಿಸಿದೆ. ಇತ್ತ ಇಸ್ರೇಲ್‌ನೊಂದಿಗಿನ ಲೆಬನಾನ್ ಸರ್ಕಾರದ ಮಾತುಕತೆಗಳಿಗೆ ಹೆಜ್ಬೊಲ್ಲಾ ವಿರೋಧ ವ್ಯಕ್ತಪಡಿಸಿದ್ದು, ಕದನವಿರಾಮದ ಮಧ್ಯೆಯೂ ದಾಳಿಯ ಆತಂಕ ಹೆಚ್ಚಿಸಿದೆ.
ಅಮೆರಿಕ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಟೆಹ್ರಾನ್ ಜೊತೆ ನಡೆಯುತ್ತಿರುವ ಮಾತುಕತೆಗಳು ಉತ್ತಮವಾಗಿ ಮುಂದುವರಿಯುತ್ತಿದೆ.
ಇದು ಒಂಟೆ ಕನಸಿನಂತೆ : ಟ್ರಂಪ್ ಹೇಳಿಕೆಗೆ ಇರಾನ್ ವ್ಯಂಗ್ಯ
ಇರಾನ್ ಜೊತೆ ನಮಗೆ ತುಂಬಾ ಉತ್ತಮ ಸಂಬಂಧವಿದೆ, ಇದು ಸುಮಾರು ನಾಲ್ಕು ವಾರಗಳ ಬಾಂಬ್ ದಾಳಿ ಮತ್ತು ಬಲವಾದ ನಿರ್ಬಂಧಗಳ ಸಂಯೋಜನೆಯ ಫಲಿತಾಂಶ ಎಂದು ನಾನು ಭಾವಿಸುತ್ತೇನೆ ಎಂದರು.
ಪ್ರಸ್ತಾವಿತ ಒಪ್ಪಂದದಲ್ಲಿ ಇರಾನ್ ತನ್ನ ಅಣ್ವಸ್ತ್ರ ಮಹತ್ವಾಕಾಂಕ್ಷೆಗಳನ್ನು ತ್ಯಜಿಸುವುದು, ಅಣು ಸಾಮಗ್ರಿಯನ್ನು ಹಸ್ತಾಂತರಿಸುವುದು, ಮುಕ್ತ ತೈಲವನ್ನು ಖಚಿತಪಡಿಸುವುದು ಮತ್ತು ಹಾರ್ಮುಜ್ ಕಣಿವೆಯನ್ನು ಪುನಃ ತೆರೆಯುವುದು ಪ್ರಮುಖವಾಗಿದೆ.








