ಹೆಬ್ರಿ : ಕಾರ್ಕಳ ಹೆಬ್ರಿ ಹೆದ್ದಾರಿಯ ಮುನಿಯಾಲಿನ ಚಟ್ಕಲ್ ಪಾದೆ ಬಳಿ ನಿಯಂತ್ರಣ ತಪ್ಪಿ ಕಾರೊಂದು ಚರಂಡಿಗೆ ಉರುಳಿದ ಘಟನೆ ಎ. 15ರಂದು ಸಂಭವಿಸಿದೆ. ಉಜಿರೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರೊಂದು ರಿಕ್ಷಾ ಹಾಗೂ ಬೈಕ್ ತಪ್ಪಿಸಲು ಹೋಗಿ ರಸ್ತೆ ಬದಿಯ ಚರಂಡಿಗೆ ಉರುಳಿದೆ. ಅಪಘಾತದಿಂದಾಗಿ ಕಾರಿನಲ್ಲಿದ್ದ ಮಹಿಳೆ ಹಾಗೂ ಮಗುವಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಮುನಿಯಾಲಿನಲ್ಲಿ ಚರಂಡಿಗೆ ಉರುಳಿದ ಕಾರು – ಪ್ರಯಾಣಿಕರು ಪಾರು






























































