ಸಿಬಿಎಸ್‌ಇ ಫಲಿತಾಂಶ – ರವಿಶಂಕರ ವಿದ್ಯಾಮಂದಿರದ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

ಕಾರ್ಕಳ : 2025–26ರ ಸಿಬಿಎಸ್‌ಇ ಹತ್ತನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರವು ಸತತವಾಗಿ ಶೇ. 100 ಫಲಿತಾಂಶ ದಾಖಲಿಸಿಕೊಂಡು ಬಂದಿದೆ. ಈ ಬಾರಿ ಪರೀಕ್ಷೆಗೆ ಹಾಜರಾದ 40 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಮನಸ್ವಿ ಎಂ. ದೇವಾಡಿಗ 92.6% ಅಂಕದೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ಅನನ್ಯ ನಾಯಕ್ 91.4% ಅಂಕ ಗಳಿಸುವುದರೊಂದಿಗೆ ಶಾಲೆಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಸ್ವಪ್ನಿಲ್ ಶೆಟ್ಟಿ 91%, ಪರೀಕ್ಷಿತ್ ಬಿ. ಶೆಟ್ಟಿಗಾರ್ 90.8%, ವೃದ್ಧಿ ಪೈ 89.8%, ವಿಯೋನ್ ಶನಲ್ ಡಿ. ಸೋಜಾ 89.6%, ಅನ್ವಿತಾ ಮೊಗೆರಾಯ 87% ವಂಶ್ ಎಂ. 86.6% ಅಂಕ ಪಡೆದಿರುತ್ತಾರೆ. ಪರೀಕ್ಷಿತ್ ಬಿ. ಶೆಟ್ಟಿಗಾರ್, ವೃದ್ಧಿ ಪೈ ಸಂಸ್ಕೃತ ವಿಷಯದಲ್ಲಿ 100 ಅಂಕ ಗಳಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವ ಅಭಿನಂದಿಸಿದ್ದಾರೆ.







































































error: Content is protected !!
Scroll to Top