ಅಜೆಕಾರು: ಅತಿಯಾದ ಮದ್ಯಪಾನದ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ವೃದ್ಧರೊಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮರ್ಣೆ ಗ್ರಾಮದ ಕುಂಟಿನಿ ಎಂಬಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಆನಂದ ಸೆರ್ವೆಗಾರ್ (65) ಮೃತಪಟ್ಟವರು. ಇವರು ಕಳೆದ 15 ವರ್ಷಗಳಿಂದ ಮರ್ಣೆ ಗ್ರಾಮದ ವಸಂತ ಶೆಟ್ಟಿ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ಆನಂದ ಅವರು ವಿಪರೀತ ಮದ್ಯಪಾನದ ಚಟ ಹೊಂದಿದ್ದರು.
ಏಪ್ರಿಲ್ 19ರ ರಾತ್ರಿ ಮಧ್ಯಾವಧಿಯಲ್ಲಿ ಮನೆಯ ಮುಂಭಾಗದ ಮಾವಿನ ಮರದ ಕೊಂಬೆಗೆ ತಮ್ಮ ಪಂಚೆಯಿಂದ (ವೇಸ್ಟಿ) ಕುತ್ತಿಗೆಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಈ ಕುರಿತು ಮೃತರ ಪುತ್ರಿ ಅಂಕಿತ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮದ್ಯಪಾನದ ವ್ಯಸನಿ ಆತ್ಮಹತ್ಯೆ































