ಜ್ಞಾನಸುಧಾದ 10 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್

ಟಾಪರ್ ಆಗಿ 99.9055199 ಪರ್ಸಂಟೈಲ್‌ನೊಂದಿಗೆ ಕನಿಷ್ಕ್ ಅಮೀನ್

ಕಾರ್ಕಳ : ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ. ನಡೆಸಿದ ಜೆಇಇ ಮೈನ್(ಬಿ.ಟೆಕ್)-2026ರ ಅಂತಿಮ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾ ಪಿ.ಯು. ಕಾಲೇಜಿನ 10 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ. ರಾಷ್ಟ್ರಮಟ್ಟದಲ್ಲಿ 15 ಲಕ್ಷದ 38 ಸಾವಿರದ 468 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಜ್ಞಾನಸುಧಾದ ಕನಿಷ್ಕ್ ಅಮೀನ್ 99.9055199 ಪರ್ಸಂಟೈಲ್ ಪಡೆದು ಜನರಲ್ ಕೆಟಗೆರಿಯಲ್ಲಿ 1608ನೇ ರ‍್ಯಾಂಕ್ ಪಡೆದಿರುತ್ತಾರೆ.
ಸಂಸ್ಥೆಯ 30 ವಿದ್ಯಾರ್ಥಿಗಳು 98 ಪರ್ಸಂಟೈಲ್‌ಗಿಂತ ಅಧಿಕ, 59 ವಿದ್ಯಾರ್ಥಿಗಳು 97 ಪರ್ಸಂಟೈಲ್‌ಗಿಂತ ಅಧಿಕ, 93 ವಿದ್ಯಾರ್ಥಿಗಳು 96 ಪರ್ಸಂಟೈಲ್‌ಗಿಂತ ಅಧಿಕ, 116 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿಂತ ಅಧಿಕ ಹಾಗೂ 244 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಫಲಿತಾಂಶ ತಮ್ಮದಾಗಿಸಿಕೊಂಡಿದ್ದಾರೆ. ವಿಷಯವಾರು ವಿಭಾಗದಲ್ಲಿ ಸಂಸ್ಥೆಯು, ಭೌತಶಾಸ್ತ್ರದಲ್ಲಿ 19 ಮಂದಿ, ರಸಾಯನಶಾಸ್ತ್ರದಲ್ಲಿ 26 ಮಂದಿ ಹಾಗೂ ಗಣಿತಶಾಸ್ತ್ರದಲ್ಲಿ 12 ಮಂದಿ ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ದಾಖಲಿಸಿಕೊಂಡಿದ್ದಾರೆ.

99 ಪರ್ಸಂಟೈಲ್‌ಗಿಂತ ಅಧಿಕ 10 ವಿದ್ಯಾರ್ಥಿಗಳು
98 ಪರ್ಸಂಟೈಲ್‌ಗಿಂತ ಅಧಿಕ 30 ವಿದ್ಯಾರ್ಥಿಗಳು,
97 ಪರ್ಸಂಟೈಲ್‌ಗಿಂತ ಅಧಿಕ 59 ವಿದ್ಯಾರ್ಥಿಗಳು
96 ಪರ್ಸಂಟೈಲ್‌ಗಿಂತ ಅಧಿಕ 93 ವಿದ್ಯಾರ್ಥಿಗಳು
95 ಪರ್ಸಂಟೈಲ್‌ಗಿಂತ ಅಧಿಕ 116 ವಿದ್ಯಾರ್ಥಿಗಳು
90 ಪರ್ಸಂಟೈಲ್‌ಗಿಂತ ಅಧಿಕ 244
ವಿದ್ಯಾರ್ಥಿಗಳು ಉತ್ತಮ ಪರ್ಸಂಟೈಲ್ ಗಳಿಸಿದ್ದಾರೆ. ಕಾರ್ಕಳ ಜ್ಞಾನಸುಧಾ, ಉಡುಪಿ ಜ್ಞಾನಸುಧಾ ಹಾಗೂ ಮಣಿಪಾಲ ಜ್ಞಾನಸುಧಾದ ಒಟ್ಟು 851 ವಿದ್ಯಾರ್ಥಿಗಳು ಜೆಇಇ ಮೈನ್ ಪರೀಕ್ಷೆಯನ್ನು ಬರೆದಿದ್ದರು. ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯಾ ಪರಿಶ್ರಮವನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಜ್ಞಾನಸುಧಾದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದೆ.











































































error: Content is protected !!
Scroll to Top