ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಕಾರ್ಕಳ : ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರು ಶವವಾಗಿ ಪತ್ತೆಯಾದ ಘಟನೆ ಕಸಬಾ ಗ್ರಾಮದಲ್ಲಿ ನಡೆದಿದೆ. ರಾಮಸಮುದ್ರ ನಿವಾಸಿ ಜೋಕಿ ಪಿರೇರಾ (74) ಮೃತ ವ್ಯಕ್ತಿ. ಇವರು ಮದ್ಯವ್ಯಸನಿಯಾಗಿದ್ದು ಮೂರ್ಛೆ ರೋಗದಿಂದ ಬಳಲುತ್ತಿದ್ದರು. ಫೆ. 28ರಂದು ಬೆಳಿಗ್ಗೆ 7 ಗಂಟೆಗೆ ತನ್ನ ಮನೆಯಿಂದ ಕಾರ್ಕಳ ಪೇಟೆಗೆ ಹೋಗುತ್ತೇನೆಂದು ಹೇಳಿ ಹೋದವರು ವಾಪಾಸು ಮನೆಗೆ ಬಂದಿರುವುದಿಲ್ಲ. ಮಾ. 9ರಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಜೋಕಿ ಪಿರೇರಾ ಕಾಣೆಯಾಗಿರುವ ಬಗ್ಗೆ ಅವರ ಪತ್ನಿ ನತಾಲಿಯಾ ಪಿರೇರಾ ದೂರು ನೀಡಿರುತ್ತಾರೆ. ಆ ದಿನ ಹುಡುಕುತ್ತಾ ರಾಮಸಮುದ್ರದ ಬಳಿ ಹೋದಾಗ ಬಂಡೆ ಕಲ್ಲಿನ ಮೇಲೆ ಜೋಕಿ ಪಿರೇರಾ ಅವರ ಮೃತದೇಹ ಕಂಡು ಬಂದಿದ್ದು, ಕೊಳೆತು ಹೋಗಿರುತ್ತದೆ. ಜೋಕಿ ಪಿರೇರಾ ಶರಾಬು ಕುಡಿದು ಬಂಡೆಯ ಮೇಲೆ ಬಿದ್ದು ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಿರುವುದಾಗಿದೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.











































































error: Content is protected !!
Scroll to Top