ವೃದ್ಧ ಮಹಿಳೆಯನ್ನು ಕಡಿದು ಕೊಲೆ : ಇಬ್ಬರು ಪೊಲೀಸ್‌ ವಶಕ್ಕೆ

ಕಾಪು : ಕಾಪು ತಾಲೂಕಿನ ಮಣಿಪುರ ಗ್ರಾಮದ ಅರಬಿ ಕೆನರಾಡಿ ಎಂಬಲ್ಲಿ ಮಹಿಳೆಯೊಬ್ಬರನ್ನು ಕಡಿದು ಕೊಲೆಗೈದ ಘಟನೆ ನಡೆದಿದೆ. ವನಜಾ ಪೂಜಾರ್ತಿ (60) ಕೊಲೆಯಾದ ಮಹಿಳೆ. ಪ್ರಕರಣ ಸಂಬಂಧ ಸ್ಥಳೀಯ ನಿವಾಸಿಗಳಾದ ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್‌ ಮೆಂಡೊನ್ಸಾ ಎಂಬಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಲೇರಿಯನ್ ಮೆಂಡೊನ್ಸಾ ಹಾಗೂ ಪ್ರವೀಣ್‌ ಮೆಂಡೊನ್ಸಾ ಅವರು ದೊಡ್ಡಪ್ಪನ – ಚಿಕ್ಕಪ್ಪ ಮಕ್ಕಳಾಗಿದ್ದು, ವನಜಾ ಪೂಜಾರ್ತಿಯವರೊಂದಿಗೆ ಆಗಾಗ್ಗೆ ಇವರಿಬ್ಬರು ಮದ್ಯಪಾನ ಮಾಡುತ್ತಿದ್ದರು. ಮಾ. 9 ರಂದು ಸಂಜೆ 5 ಗಂಟೆಯಿಂದ ಮಾ. 10 ರಂದು ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್‌ ಮೆಂಡೊನ್ಸಾ ಅವರು ವನಜಾ ಪೂಜಾರ್ತಿಯನ್ನು ಹರಿತವಾದ ಆಯುಧದಿಂದ ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಕೆಎಂಸಿ ಮಣಿಪಾಲದ ಫೊರೆನ್ಸಿಕ್ ವೈದ್ಯರು, ಸೀನ್‌ ಆಫ್ ಕ್ರೈಂ ಆಫೀಸರ್‌ (SOCO) ತಂಡ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.











































































error: Content is protected !!
Scroll to Top