ಸಾಮಾಜಿಕ ಮುಂದಾಳು ತೆಳ್ಳಾರು ಶಾಬುದ್ಧೀನ್‌ ನಿಧನ

ಕಾರ್ಕಳ : ತೆಳ್ಳಾರು ಮಂಜುನಾಥ ಫೈ ಸ್ಮಾರಕ ಪ್ರೌಢಶಾಲಾ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ, ಶಾಲಾ ಕಟ್ಟಡ ಸಮಿತಿಯ ಸದಸ್ಯ, ತೆಳ್ಳಾರು ಸುನ್ನಿ ಜಮಾತ್‌ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್‌ ಮುಂದಾಳು, ತೆಳ್ಳಾರು ನಿವಾಸಿ ಶಾಬುದ್ದೀನ್‌ ಸಾಹೇಬ್‌ (65) ಅವರು ಫೆ. 17ರಂದು ಹೃದಯಾಘಾತಕ್ಕೀಡಾಗಿ ನಿಧನ ಹೊಂದಿದರು. ಜಾತಿ, ಮತ, ಪಕ್ಷ ಭೇದವಿಲ್ಲದೇ ಅವರು ಎಲ್ಲರೊಂದಿಗೂ ಬೆರೆಯುತ್ತಿದ್ದ ಕಾರಣ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.









error: Content is protected !!
Scroll to Top