ಜನಪ್ರತಿನಿಧಿಗಳಿಲ್ಲದ ಜಿ. ಪಂ., ತಾ.ಪಂ. ಗಳಿಗೆ ಜನವರಿ ತಿಂಗಳ ಮೊದಲ ವಾರದಲ್ಲಿ ಚುನಾವಣೆ?

ರಾಜ್ಯ ಸಚಿವ ಸಂಪುಟದಲ್ಲಿ ಪಂಚಾಯತ್ ಚುನಾವಣೆಗಳ ಬಗ್ಗೆ ಮಹತ್ವದ ತೀರ್ಮಾನ

ಬೆಂಗಳೂರು: ಜನಪ್ರತಿನಿಧಿಗಳೇ ಇಲ್ಲದೆ ಒಂದು ಅವಧಿ ಮುಗಿಸಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ಗಳಿಗೆ ಬಹುತೇಕ ಜನವರಿ ತಿಂಗಳ ಮೊದಲ ವಾರದಲ್ಲಿ ಚುನಾವಣೆ ನಡೆಸಲು ರಾಜ್ಯ ಸಚಿವ ಸಂಪುಟ ಬಯಸಿದೆ. ಅದಾದ ನಂತರ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಡಿಸೆಂಬರ್‌ನಲ್ಲಿ ಪ್ರಕ್ರಿಯೆ ಆರಂಭಿಸಿ ಜನವರಿ ಮೊದಲ ವಾರದಲ್ಲೇ ಚುನಾವಣೆ ಪೂರ್ಣಗೊಳಿಸಲು ಸಂಪುಟ ತೀರ್ಮಾನಿಸಲಾಗಿದೆ.

ಚುನಾವಣೆ ನಡೆಸದ ಕಾರಣ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಸ್ಥಗಿತವಾಗಿದ್ದು, ಪಂಚಾಯಿತಿಗಳಲ್ಲಿ ಅಭಿವೃದ್ದಿಗೆ ಹಣ ಇಲ್ಲದಂತಾಗಿದೆ. ಈಗಾಗಲೇ ಐದಾರು ವರ್ಷಗಳು ಕಳೆದುಹೋಗಿದ್ದು, ಈಗಲೂ ಚುನಾವಣೆ ನಡೆಸದಿದ್ದರೆ ಪಕ್ಷದ ಸರ್ಕಾರಕ್ಕೆ ಗೌರವ ಬರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಗ್ರಾಮ ಪಂಚಾಯತ್ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುವುದಿಲ್ಲ. ಹಾಗಾಗಿ, ಮೊದಲಿಗೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಸಿ, ಬಳಿಕ ಗ್ರಾಮ ಪಂಚಾಯತ್ ಚುನಾವಣೆ ನಡೆಸುವ ತೀರ್ಮಾನಕ್ಕೆ ಬರಲಾಗಿದೆ. ಸದ್ಯ ಮೀಸಲು ಕರಡು ಸಿದ್ಧವಾಗಿದ್ದು, ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕ್ಯಾಬಿನೆಟ್ ಬಯಸಿರುವುದಾಗಿ ಮೂಲಗಳು ತಿಳಿಸಿವೆ.













































error: Content is protected !!
Scroll to Top