ಮಣಿಪಾಲ: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಟಿ. ಏಮ್. ಜಿ. ಸುನಿಧಿ ಫೌಂಡೇಷನ್ ಮತ್ತು ಎಂ.ಪಿ.ಐ.ಎಸ್., ಮಣಿಪಾಲ ಗ್ರಾಮ ಪಂಚಾಯತ್ ಬೈಲೂರು ಹಾಗೂ ಶ್ರೀ ವಿನಾಯಕ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ(ರಿ) ಬೈಲೂರು ಇವರ ಸಹಯೋಗದಲ್ಲಿ 10 ದಿನಗಳ ಸಾರಿ ಕುಚ್ಚು, ಸಾರಿ ಡ್ರ್ಯಾಪಿಂಗ್ ಮತ್ತು ಬಾಕ್ಸ್ ಫೋಲ್ಡಿಂಗ್ ತರಬೇತಿಯ ಸಮಾರೋಪ ಸಮಾರಂಭ ಬೈಲೂರು ಗ್ರಾಮ ಪಂಚಾಯತ್‌ನ ಸಭಾಂಗಣದಲ್ಲಿ ಜರುಗಿತು.
ಭಾರತೀಯ ವಿಕಾಸ ಟ್ರಸ್ಟ್ ನ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಅವರು ಮಾತನಾಡಿ, ತರಬೇತಿಯನ್ನು ಪಡೆದು ಸ್ವಂತ ಉದ್ಯಮವನ್ನು ಸ್ಥಾಪಿಸಬೇಕು ಎಂದು ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿ ರಮ್ಯಾ ಎ.ಸಿ. ಅವರು ಮಾತನಾಡಿ, ಮಹಿಳೆಯರು ಅವಕಾಶವನ್ನು ಬಳಸಿಕೊಂಡು ತರಬೇತಿಯನ್ನು ಪಡೆದು ಸ್ವಾವಲಂಬಿಗಳಾಗಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಶ್ರೀ ವಿನಾಯಕ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಾಲಿನಿ ಸುಕೇಶ್ ಪೂಜಾರಿ, ಸಂಪನ್ಮೂಲ ವ್ಯಕ್ತಿ ವಿಶಾಲ ಮತ್ತು ಶುಭ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಸಂಜೀವಿನಿ ಸದಸ್ಯೆ ಸುಜಾತಾ ಶೆಟ್ಟಿ ನಿರೂಪಿಸಿ, ಸಂಜೀವಿನಿ ಒಕ್ಕೂಟದ ಎಂಬಿಕೆ ರವಿಕಲಾ ವಂದಿಸಿದರು























