ಕಂಬಳದ ಹಿರಿಯ ಓಟಗಾರ ಅಶೋಕ್ ಕುಮಾರ್ ಜೈನ್ ಅವರಿಗೆ ಕಂಬಳ ಅಕಾಡೆಮಿ ಪ್ರಶಸ್ತಿ

ಕಾರ್ಕಳ: ಕಂಬಳದ ಹಿರಿಯ ಓಟಗಾರ ಈದು ಪಡ್ಯಾರಮನೆ ಅಶೋಕ್ ಕುಮಾರ್ ಜೈನ್ ಅವರನ್ನು 2026 ನೇ ಸಾಲಿನ ‌’ಕಂಬಳ ಅಕಾಡೆಮಿ ಪ್ರಶಸ್ತಿ’ ಅರಸಿಕೊಂಡು ಬಂದಿದೆ.

ಅ.8 ಗುರುವಾರ ಬೆಳಿಗ್ಗೆ 11-30ಕ್ಕೆ ಒಂಟಿಕಟ್ಟೆಯ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.

ಅಶೋಕ್ ಕುಮಾರ್ ಜೈನ್ ಅವರ ಕಂಬಳ ಕ್ಷೇತ್ರದ ಅಪಾರ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ‌.















































error: Content is protected !!
Scroll to Top