ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ : ಇಂದು ಬೆಳಗ್ಗೆ ಉದ್ಯಮಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜೋಡುರಸ್ತೆಯ ಬಳಿ ನಡೆದಿದೆ.

ಮೃತರನ್ನು ಮಂಜುನಾಥ್ ಪೈ(51) ಎಂದು ಗುರುತಿಸಲಾಗಿದೆ.

ಕಾರ್ಕಳದ ಜೋಡುರಸ್ತೆ ಬಳಿ ತಮ್ಮದೇ ಹೊಸ ಫ್ಲಾಟ್‌ ಹೊಂದಿದ್ದ ಮಂಜುನಾಥ್ ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ಬಂದಿದ್ದ ಮಂಜುನಾಥ್ ಬಳಿಕ ಸಾವಿಗೆ ಶರಣಾಗಿದ್ದಾಗಿ ತಿಳಿದು ಬಂದಿದೆ.

ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಅವರು ಜೋಡುರಸ್ತೆ ಪರಿಸರದಲ್ಲಿ ಹಲವಾರು ಫ್ಲಾಟ್ ನಿರ್ಮಿಸಿ, ಉದ್ಯಮಿಯಾಗಿ ಗುರುತಿಸಿ ಕೊಂಡಿದ್ದರು.













































error: Content is protected !!
Scroll to Top