ಹಾಲಿನ ದರ ಏರಿಕೆಗೆ ಸಂಪುಟ ಸಭೆಯಲ್ಲಿ ಅಸ್ತು: ಪ್ರತಿ ಲೀ. ಗೆ 8 ರೂ. ಏರಿಕೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಗ್ರಾಹಕರ ಜೇಬಿಗೆ ‌ಮತ್ತೆ ಕತ್ತರಿ ಬೀಳುವುದು ಖಚಿತವಾಗಿದೆ.

ನಂದಿನಿ ಹಾಲಿನ ಪ್ರತಿ ಲೀ. ಗೆ 8 ರೂ. ಏರಿಕೆಗೆ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ದೊರೆತಿದೆ. ನ. 1 ರಿಂದಲೇ ಹೊಸ ದರ ಜಾರಿಯಾಗುವ ಸಾಧ್ಯತೆ ಇದೆ. ಏರಿಕೆ ಮಾಡಿದ ದರದಲ್ಲಿ ಹೆಚ್ಚಿನ ಪಾಲನ್ನು ಹಾಲು ಉತ್ಪಾದಕರಿಗೆ ನೀಡಲು ಸರ್ಕಾರ ನಿರ್ಧರಿಸಿದೆ.

ಏರಿಕೆಯಾಗಲಿರುವ 8 ರೂ. ಗಳಲ್ಲಿ 6 ರೂ. ನೇರವಾಗಿ ರೈತರಿಗೆ ಹಾಗೂ 2 ರೂ ಹಾಲು ಒಕ್ಕೂಟಗಳಿಗೆ ನೀಡುವ 80:20 ಅನುಪಾತವನ್ನು ಸರ್ಕಾರ ಅನುಸರಿಸಲು ನಿರ್ಧರಿಸಿದೆ ಎನ್ನಲಾಗಿದೆ. ಹಾಲು ಒಕ್ಕೂಟಗಳು 70:30 ಅನುಪಾತವನ್ನು ಕೋರಿದ್ದರೂ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ರೈತರಿಗೆ ಹೆಚ್ಚಿನ ಪಾಲು ಸಿಗುವ 80:20 ಮಾದರಿಯ ಪರವಾಗಿ ನಿಲುವು ವ್ಯಕ್ತಪಡಿಸಿದ್ದರು. ಹೀಗಾಗಿ ಹೊಸ ದರ ಜಾರಿಯಾದರೆ ಪ್ರತಿ ಲೀಟರ್‌ಗೆ ಹೆಚ್ಚುವರಿ 8 ರೂನಲ್ಲಿ ರೈತರಿಗೆ 6 ರೂ ತಲುಪಲಿದೆ ಎಂದು ಹೇಳಲಾಗುತ್ತಿದೆ.

















































error: Content is protected !!
Scroll to Top