ಪಿ.ಎಂ. ಸೂರ್ಯಘರ್ ಯೋಜನೆಯ ಸೇವಾಸೇತು ಅಭಿಯಾನಕ್ಕೆ ಶಾಸಕ ಸುನಿಲ್ ಕುಮಾರ್ ಚಾಲನೆ

ಕಾರ್ಕಳ: ಮೆಸ್ಕಾಂ ನಿಟ್ಟೆ ಉಪವಿಭಾಗ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಶಿ ಯೋಜನೆಯಾದ “ಪಿ. ಎಂ. ಸೂರ್ಯಘರ್” ಯೋಜನೆಯನ್ನು ಮನೆಮನೆಗೆ ತಲುಪಿಸುವ ‘ಸೇವಾಸೇತು’ ಅಭಿಯಾನಕ್ಕೆ ಶಾಸಕ ವಿ. ಸುನಿಲ್ ಕುಮಾರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮನೆಯ ಮೇಲ್ಚಾವಣಿಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸುವ ಮೂಲಕ ಕುಟುಂಬಗಳ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ದೇಶದ ಇಂಧನ ಸ್ವಾವಲಂಬನೆ ಮತ್ತಷ್ಟು ಬಲಪಡಿಸಬೇಕು. ಈ ನಿಟ್ಟಿನಲ್ಲಿ ಕಾರ್ಕಳ ತಾಲೂಕಿನ ಪ್ರತಿಯೊಂದು ಮನೆಯೂ ಕೇವಲ ವಿದ್ಯುತ್ ಬಳಕೆದಾರರ ಮನೆ ಮಾತ್ರವಾಗಿರದೆ, ವಿದ್ಯುತ್ ಉತ್ಪಾದಿಸುವ ಮನೆಯಾಗಿ ಪರಿವರ್ತನೆಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಈ ಯೋಜನೆಗೆ ನೋಂದಣಿ ಮಾಡಿದ ಮೊದಲ 5 ಫಲಾನುಭವಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಕಾರ್ಕಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ ಉಪಸ್ಥಿತರಿದ್ದರು.

ಸಹಾಯಕ ಕಾರ್ಯನಿವಾಹಕ ಇಂಜಿನಿಯರ್ ವಿನಾಯಕ್ ಕೆ. ಕಾಮತ್ ನಿರೂಪಿಸಿದರು.

ಪವರ್ ಮೆನ್ ಮತ್ತು ಶಾಖಾಧಿಕಾರಿಗಳನ್ನೊಳಗೊಂಡ ಮೆಸ್ಕಾಂ ನಿಟ್ಟೆ ತಂಡ ಕಾರ್ಯಕ್ರಮವನ್ನು ನಿರ್ವಹಿಸಿತು.













































error: Content is protected !!
Scroll to Top