ವರ್ಗಾವಣೆ ಹೊಂದಿದ ಕಣಜಾರು ಕೆನರಾ ಬ್ಯಾಂಕ್ ಅಧಿಕಾರಿಗಳಿಗೆ ಸನ್ಮಾನ

ಕಾರ್ಕಳ : ಕಳೆದ ಮೂರು ವರ್ಷಗಳಿಂದ ಕಣಜಾರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಾರ್ಯನಿರ್ವಹಿಸಿ ವರ್ಗಾವಣೆ ಹೊಂದಿರುವ ಶಾಖಾ ಪ್ರಬಂಧಕಿ ಧನ್ಯವಿ ಹಾಗೂ ಸಿಬ್ಬಂದಿ ಕೌಡೂರಿನ ಸುಪ್ರಿಯಾ ಹೆಗ್ಡೆ ಅವರನ್ನು ಬ್ಯಾಂಕ್‌ ಗ್ರಾಹಕರು ಸನ್ಮಾನಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಪ್ರಭು, ಬ್ಯಾಂಕ್‌ ಗ್ರಾಹಕರಾದ ವಿಕ್ರಂ ಹೆಗ್ಡೆ, ನಿವೃತ್ತ ಬ್ಯಾಂಕ್ ಉದ್ಯೋಗಿ ಹರಿದಾಸ ಹೆಗ್ಡೆ ಅವರು ಧನ್ಯವಿ ಹಾಗೂ ಸುಪ್ರಿಯಾ ಅವರ ಸೇವಾಗುಣವನ್ನು ಕೊಂಡಾಡಿದರು.
ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಕಣಜಾರು ಪ್ರೌಢಶಾಲಾ ಮುಖ್ಯಶಿಕ್ಷಕಿ ನವೀನ ಕುಮಾರಿ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕರಾದ ಜಸ್ಮಿನ್ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಎ ಚಂದನ್ ಹೆಗ್ಡೆ, ಉದ್ಯಮಿ ಕೊಳ್ಕೆಬೈಲ್ ಸುಧೀರ್ ಶೆಟ್ಟಿ, ಉದ್ಯಮಿ ಪೆಲತ್ತೂರು ಉದಯ ಶೆಟ್ಟಿ, ವಿನಯ್ ಕುಮಾರ್ ಶೆಟ್ಟಿ, ಐವನ್ ಮಿರಾಂಡ ಉಪಸ್ಥಿತರಿದ್ದರು.
ರಮೇಶ್ ಕಲ್ಲೊಟ್ಟೆ ಸ್ವಾಗತಿಸಿ, ನಿರೂಪಿಸಿದರು. ನಿವೃತ್ತ ಶಿಕ್ಷಕ ನರಸಿಂಹ ನಾಯಕ್ ಪ್ರಸ್ತಾವಿಕ ಮಾತುಗಳನ್ನಾಡಿದರು. ನಿವೃತ್ತ ಶಿಕ್ಷಕ ಎಲಿಯಾಸ್ ರೆಬೆಲ್ಲೊ ವಂದಿಸಿದರು.









































































































error: Content is protected !!
Scroll to Top